ದರ್ಮಸ್ಥಳ ಕ್ಷೇತ್ರಕ್ಕೆ ಕೆಟ್ಟ ಹೆಸರುತರಲು ಮತಾಂಧಶಕ್ತಿಗಳ ಪಿತೂರಿೆಗೆ ಖಂಡನೆ-ಕಾನೂನು ಕ್ರಮಕ್ಕೆ ಶ್ರೀನಂಜು0ಡಸ್ವಾಮಿಗಳ ಅಗ್ರಹ • ಆ.11 ರಂದು ಮಂಡ್ಯ ಸಿಲ್ವರ್‌ಜುಬಿಲಿ ಪಾರ್ಕನಿಂದ ಪ್ರತಿಭಟನೆ ಜಾಥಾ-ಕಾನೂನು ಕ್ರಮಕ್ಕೆ ಅಗ್ರಹಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ರಾಜ್ಯದ ಐತಿಹಾಸಿಕ ಪರಂಪರೆ ಹಾಗೂ ಇತಿಹಾಸವುಳ್ಳ ದರ್ಮಸ್ಥಳ ಕ್ಷೇತ್ರಕ್ಕೆ ಕೆಟ್ಟ ಹೆಸರು ತರಲು ಪಿತೂರಿ ನಡೆಯುತ್ತಿರುವುದು ಖಂಡನೀಯ, ಈ ಬಗ್ಗೆ ಸರ್ಕಾರ ಕಾನೂನು ಕ್ರಮ ಜರುಗಿಸುವಂತೆ ಕುಂದೂರು ಬೆಟ್ಟದ ಸುಕ್ಷೇತ್ರ ಶ್ರೀ ರಸಸಿದ್ದೇಶ್ವರ ಮಠಾಧ್ಯಕ್ಷರಾದ ಶ್ರೀ ನಂಜು0ಡಸ್ವಾಮಿಗಳು ಅಗ್ರಹಿಸಿದರು. ಈ ಸಂಬ0ಧ ಸುಕ್ಷೇತ್ರ ಶ್ರೀ ರಸಸಿದ್ದೇಶ್ವರ ಮಠದಲ್ಲಿ ಬಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಅಪರಿಚಿತ ವ್ಯಕ್ತಿ ದೂರು ನೀಡಿದ್ದಾನೆ.ಈ ಬಗ್ಗೆ ಸರ್ಕಾರ ಎಸ್‌ಐಟಿ ತನಿಖೆ ನಡೆಸುತ್ತಿದೆ,ತನಿಖೆ ವರದಿ ಹೊರಬೀಳಲಿ ತಪ್ಪಿತಸ್ಥರು ಯಾರೆಂದು ತಿಳಿಯಲಿದೆ, ಅದನ್ನು ಬಿಟ್ಟು ಈ ನಡುವೆ ಕಿಡಿಗೇಡಿಗಳು,ಮತಾಂಧ ಶಕ್ತಿಗಳು ದರ್ಮಸ್ಥಳ ಕ್ಷೇತ್ರದ ಬಗ್ಗೆ,ದರ್ಮಾದಿಕಾರಿಗಳ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುವುದು ಸರಿಯಲ್ಲ,ಇದು ಕೋಟ್ಯಾಂತರ ಭಕ್ತರ ಧಾರ್ಮಿಕ ನಂಬಿಕೆಗೆ ನೋವನ್ನುಂಟುಮಾಡುತ್ತದೆ ಎಂದರು. ಅಪರಿಚಿತ ವ್ಯಕ್ತಿಯ ದೂರು ಕಟ್ಟು ಕಥೆಯಂತಿದೆ, ದಿನನಿತ್ಯ ನಡೆಯುತ್ತಿರುವ ಘಟನೆಗಳು,ಇದೊಂದು ದುರುದ್ದೇಶ ಪೂರಿತ ಹಾಗೂ ಕ್ಷೇತ್ರದ ಬಗ್ಗೆ ಅಪಪ್ರಚಾರ ಮಾಡಲು ಕಿಡಿಗೇಡಿಗಳ ರೂಪಿಸಿರುವ ಷಡ್ಯಂತ್ರವಾಗಿದೆ ಎಂಬುದು ರಾಜ್ಯದ ಜನತೆ ನೋಡುತ್ತಿದ್ದಾರೆ.ಸತ್ಯ ಏನೆಂಬುದು ರಾಜ್ಯದ ಜನತೆಗೆ ಗೊತ್ತಿದೆ ಎಂದ ಅವರು ಹಿಂದೂ ದಾರ್ಮಿಕ ಭಾವನೆಗಳ ಮೇಲೆ ಧಾಳಿ ಮಾಡುತ್ತಿರುವ ಇಂತಹ ಘಟನೆಯನ್ನು ರಾಜ್ಯದ ಜನತೆ ಖಂಡಿಸಬೇಕು,ಅಪಪ್ರಚಾರಕ್ಕೆ ಅಸ್ಪದ ನೀಡಬಾರದು, ಹಿಂದೂಗಳು ಜಾಗೃತರಾಗುವಂತೆ ಅವರು ಈ ಸಂದರ್ಭದಲ್ಲಿ ಕರೆ ನೀಡಿದರು. ಶ್ರೀ ಕ್ಷೇತ್ರ ದರ್ಮಸ್ಥಳವು ನೂರಾರು ಸೇವೆಗಳ ಮೂಲಕ ಕೋಟ್ಯಾಂತರ ಬಡ ಜನರ ಜೀವನಕ್ಕೆ ದಾರಿದೀಪವಾಗಿದೆ,ಇಡೀ ವಿಶ್ವದಲ್ಲಿ ಅವರ ಸೇವೆಗಳು,ಯೋಜನೆಗಳ ಅನುಷ್ಟಾನ,ಸೇವೆಗಳು ಮಾದರಿಯಾಗಿವೆ,ಇದನ್ನು ಸಹಿಸದೆ ಇವರಿಗೆ ಮಸಿ ಬಳಿಯಲು ಕಟ್ಟುಕಥೆಗಳ ಅರೋಪ ಖಂಡನಿಯ,ಇದು ನಿಲ್ಲಬೇಕು,ಸರ್ಕಾರ ಈ ಘಟನೆಗಳನ್ನು ಗಂಭಿರವಾಗಿ ಪರಿಗಣಿಸುವಂತೆ ಅವರು ಈ ಸಂದರ್ಭದಲ್ಲಿ ಸರ್ಕಾರವನ್ನು ಒತ್ತಾಯಿಸಿದರು ಕಾನೂನು ಕ್ರಮಕ್ಕೆ ಒತ್ತಾಯಿಸಿ ಆ.೧೧ ರಂದು ಪ್ರತಿಭಟನಾ ಜಾಥಾ : ದರ್ಮಸ್ಥಳದ ಬಗ್ಗೆ ಹಾಗೂ ದರ್ಮಾದಿಕಾರಿಗಳ ಬಗ್ಗೆ ಅಪಪ್ರಚಾರ,ನಿಂಧನೆ,ಅರೋಪ ಮಾಡುವನ್ನು ನಿಲ್ಲಸಬೇಕು,ಅಪಪ್ರಚಾರದಲ್ಲಿ ತೊಡಗಿರುವವರ ವಿರುದ್ದ ಸೂಕ್ತ ತನಿಖೆ ನಡೆಸಬೇಕು,ಈ ಬಗ್ಗೆ ಸರ್ಕಾರ ಕಾನೂನು ಕ್ರಮ ಕೈಗೊಳ್ಳಬೇಕು,ಹಿಂದೂಗಳ ಧಾರ್ಮಿಕ ನಂಬಿಕೆಗೆ ಚ್ಯುತಿ ಬಾರದಂತೆ ಕ್ರಮವಹಿಸುವಂತೆ ಒತತಾಯಿಸಿ ಆ.೧೧ ರಂದು ಸೋಮವಾರ ಬೆಳಿಗ್ಗೆ ೧೧ ಗಂಟೆಗೆ ಜಿಲ್ಲೆಯ ಎಲ್ಲ ಹರಗುರು ಚರಮೂರ್ತಿಗಳ ಸಮ್ಮುಖದಲ್ಲಿ ಶ್ರೀ ದರ್ಮಸ್ಥಳ ಭಕ್ತರು ಹಮ್ಮಿಕೊಂಡಿರುವ ಪ್ರತಿಭಟನೆಯಲ್ಲಿ ಜಿಲ್ಲೆಯ ಎಲ್ಲ ಭಕ್ತರು,ಸಮಾಜ ಸೇವಕರು,ದಾರ್ಮಿಕ ಮುಖಂಡರುಗಳು ಹೆಚ್ಚಿನ ಸಂಖ್ಯೆಲ್ಲಿ ಅಗಮಿಸಿ ಪ್ರತಿಭಟನೆ ಜಾಥಾವನ್ನು ಯಶಸ್ವಿಗೊಳಿಸುವಂತೆ ಅವರು ಈ ಸಂದರ್ಭದಲ್ಲಿ ತಿಳಿಸಿದರು.

- ಮಾಗನೂರು ಎಂ ಶಿವಕುಮಾರ್Malavalli, Mandya🤝on 13 August