ಕೊಳ್ಳೇಗಾಲ ಸುದ್ದಿ ಸಿದ್ದಯ್ಯನ ಪುರ ಗ್ರಾ. ಪಂ. ನರೇಗಾ ಗ್ತಾಮಸಭೆ, ಜಿಲ್ಲಾ ಪಂಚಾಯತ್ ಚಾಮರಾಜನಗರ, ತಾಲ್ಲೂಕು ಪಂಚಾಯತ್ ಕೊಳ್ಳೇಗಾಲ ತಾಲ್ಲೂಕಿನ ಸಿದ್ದಯ್ಯನಪುರ ಗ್ರಾಮ ಪಂಚಾಯಿತಿಯ 2025-26 ನೇ ಸಾಲಿನ ಮಹಾತ್ಮ ಗಾಂಧೀಜಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತಾರಿ ಯೋಜನೆ ಹಾಗೂ 2024-25 ನೇ ಸಾಲಿನ 15 ಹಣಕಾಸು ಯೋಜನೆ ನಡೆರುವ ಕಾಮಗಾರಿಗಳ ದಾಖಲೆಗಳ ವರದಿಯನ್ನು ಸಾರ್ವಜನಿಕರ ಮುಂದೆ ಮಂಡಿಸುವ ಸಲುವಾಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಲಕ್ಕರಸಪಾಳ್ಯ ನಿಜಗುಣಸ್ವಾಮಿ ಗದ್ದುಗೆ ಅವರಣದಲ್ಲಿ ಆಯೋಜಿಸಲಾಗಿತ್ತು ಸಭೆಯಲ್ಲಿ ಸಭೆಯಲ್ಲಿ ಸಾಮಾಜಿಕ ಪರಿಶೋಧನಾಧಿಕಾರಿ ಸಿದ್ದಪ್ಪರವರು ಮಾತನಾಡಿ ಸಿದ್ದಯ್ಯನಪುರ ಗ್ರಾಮ ಪಂಚಾಯಿತಿಯಲ್ಲಿ 2025-26 ನೇ ಸಾಲಿನ ಮಹಾತ್ಮ ಗಾಂಧೀಜಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಲ್ಲಿ ನಡೆದಿರುವ ಕಾಮಗಾರಿಗಳ ಬಗ್ಗೆ ಮೂರು ದಿನಗಳ ಕಾಲ ಸಾಮಾಜಿಕ ಲೆಕ್ಕ ಪರಿಶೀಲನೆ ನಡೆಸಿ ಸ್ಥಳ ಪರಿಶೀಲನೆ ನಡೆಸಿ ವರದಿಯನ್ನು ಸಿದ್ದಪಡಿಸಿ ಕಾಮಗಾರಿಗಳ ದಾಖಲಾಗಿರುವ ವರದಿಯನ್ನು ಸಾರ್ವಜನಿಕರ ಮುಂದೆ ತಿಳಿಸುವುದಕ್ಕಾಗಿ ಸಭೆಯನ್ನು ಆಯೋಜಿಸಲಾಗಿದೆ ಪಂಚಾಯಿತಿಯಲ್ಲಿ ಒಟ್ಟು 38 ಕಾಮಗಾರಿಗಳು ನಡೆದಿದ್ದು ಕಾಲುವೆ ಅಭಿವೃದ್ಧಿ 6, ಕೆರೆ ಅಭಿವೃದ್ಧಿ 4, ಶಾಲಾ ಕಂಪೌಂಡ್ 01, ಸಮುದಾಯದ ಕಾಮಗಾರಿ 11, ತೋಟ ಗಾರಿಕೆ ಇಲಾಖೆಯಿಂದ 6 ಕಾಮಗಾರಿ ಗ್ರಾಮ ಪಂಚಾಯಿತಿ ಇತರೆ ಇಲಾಖೆಗಳು ಸೇರಿ 44 ಕಾಮಗಾರಿಗಳು ನಡೆದಿದ್ದು ಕೂಲಿ ಮೊತ್ತ 2688706 ಸಾಮಗ್ರಿ ಮೊತ್ತ, 182458 ಒಟ್ಟು 2871164 ರೂಪಾಯಿಗಳು ಖರ್ಚು ಆಗಿರುತ್ತದೆ, ಎಂದು ತಿಳಿಸಿದರು. ಪಂಚಾಯಿತಿ ವತಿಯಿಂದ ಕೊಳ್ಳೇಗಾಲ ನಗರಸಭೆ ವ್ಯಾಪ್ತಿಗೆ ಸೇರಿದ ಪಾಪನ ಕೆರೆಯ ಎರಡು ಏಕರೇ ಜಾಗದಲ್ಲಿ ನರೇಗಾ ಯೋಜನೆಯಲ್ಲಿ ಕೆಲಸ ಮಾಡಿರುವುದು ಸಾರ್ವಜನಿಕರಿಂದ ವಿರೋಧ ವ್ಯಕ್ತವಾಗಿತ್ತು. ನಂತರ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶಿವಮೂರ್ತಿ ಮಾತನಾಡಿ ಪಾಪನಾ ಕೆರೆ ಎರಡು ಏಕರೇ ಜಮೀನು ಸಿದ್ದಯ್ಯಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿದೆ ಎಂದು ಹಿಂದೆ ಇದ್ದ ಪಿಡಿಒ ರವರು ಕ್ರಿಯಯೋಜನೆಯನ್ನು ಮಾಡದ್ದರು ನಾನು ಕೆಲಸ ಮಾಡಿಸಿದೆ, ಅದ್ದಕೆ ಬೇಕಾದ ದಾಖಲೆಗಳು ನಮ್ಮ ಬಳಿ ಇದೆ ಎಂದರು. ಸಾಮಾಜಿಕ ಪರಿಶೋಧನಾಧಿಕಾರಿ ಸಿದ್ದಪ್ಪರವರು ಮಾತನಾಡಿ ಇನ್ನು ಮುಂದೆ ಕೆರೆಯಲ್ಲಿ ಕೆಲಸ ಮಾಡಿಸಬೇಡಿ ಎಂದು ತಿಳಿಸಿದರು ಉಗನೀಯ ಗ್ರಾಮದಲ್ಲಿ ಅಂಗವಾಡಿ ಗ್ರಾಮ 1 ಬಾಡಿಗೆ ಮನೆಯಲ್ಲಿ ನಡೆಯುತ್ತಿದೆ ಗ್ತಾಮದಲ್ಲಿ ಅಂಗನವಾಡಿಗೆ ಸ್ವಂತ ಕಟ್ಟಡ ನಿರ್ಮಾಣ ಮಾಡಿಸಿ ಕೊಡಿ ಎಂದು ಗ್ರಾಮ ಪಂಚಾಯಿತಿ ಅಧಿಕಾರಿಯವರಿಗೆ ಮಾಹಿತಿ ಕೊಟ್ಟರು ಇನ್ನು ಕೂಡ ಗಮನ ಹರಿಸಿಲ್ಲ ಈಗಾಗಲೇ ಇರುವ ಬಾಡಿಗೆ ಕಟ್ಟಡ ಅಂಗನವಾಡಿ ಕೇಂದ್ರದ ಮುಂಭಾಗ ಚರಂಡಿ ಕಸದ ರಾಶಿ ತುಂಬಿಕೊಂಡು ಕಲುಷಿತ ವಾತಾವರಣ ನಿರ್ಮಾಣವಾಗಿ ಮಕ್ಕಳಿಗೆ ಅನಾರೋಗ್ಯ ಸಮಸ್ಯೆ ಉಂಟಾಗಿ ತೊಂದರೆಯಾಗುತ್ತಿದೆ ಅದರು ಸಹ ಪಂಚಾಯಿತಿ ಅಧಿಕಾರಿಗಳು ಕ್ರಮ ವಹಿಸಿಲ್ಲ ಎಂದು ಅಂಗನವಾಡಿ ಕಾರ್ಯಕರ್ತೆ ಸುಮಲತಾರವರು ಆರೋಪಿಸಿದರು ಸಭೆಯಲ್ಲಿ ಅಧ್ಯಕ್ಷರಾದ ಶಾಂತಮ್ಮ,, ಸದಸ್ಯರು ಮಂಗಳಮ್ಮ, ಶಶಿಕುಮಾರಿ, ಪಿಡಿಒ ಶಿವಮೂರ್ತಿ, ಕಾರ್ಯದರ್ಶಿ ಸತೀಶ್, ಸುಜಾತ, ಮಾಲ, ಹಾಗೂ ಇನ್ನಿತರರು ಇದ್ದರು.