ಕೊಳ್ಳೇಗಾಲ = .ಇದೇ ತಿಂಗಳು ನ. 29 ಕ್ಕೆ ಅಂಬೇಡ್ಕರ್ ಭವನವನ್ನು ಲೋಕಾರ್ಪಣೆ ಮಾಡಲಾಗುವುದು ಎಂದು ಡಾ! ಬಿ. ಆರ್. ಅಂಬೇಡ್ಕರ್ ಸ್ಮಾರಕ ಸಂಘದ ಅಧ್ಯಕ್ಷ ಆನಂದ್ ಮೂರ್ತಿ ತಿಳಿಸಿದರು. ಈ ಸಂಬಂಧ ಪಟ್ಟಣದ ನೂತನ ಅಂಬೇಡ್ಕರ್ ಭವನದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಪಟ್ಟಣದ ಭೀಮನಗರದ ಬಹು ದಿನಗಳ ಕನಸು ಈ ತಿಂಗಳ ಅಂತ್ಯದಲ್ಲಿ ನನಸಾಗುವ ಕಾಲ ಕೂಡಿಬಂದಿದೆ. ಕಳೆದ ಹಲವಾರು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಅಂಬೇಡ್ಕರ್ ಭವನ ಉದ್ಘಾಟನೆ ಆಗುತ್ತಿರುವುದು ನಮ್ಮ ಸಮುದಾಯದ ಜನರಲ್ಲಿ ಹರ್ಷ ತಂದಿದೆ ಎಂದರು ಎಲ್ಲಾ ಕಾರ್ಯಕ್ರಮಗಳು ಚೇತವನದ ಮನೋರಖಿತ ಬಂತೇಜಿ ಮೈಸೂರಿನ ಉರಿಲಿಂಗಿ ಪೆದ್ದಿ ಮಠದಜ್ಞಾನ ಪ್ರಕಾಶ್ ಸ್ವಾಮೀಜಿಗಳ ದಿವ್ಯ ಸಾನ್ವಿಧ್ಯದಲ್ಲಿ ನಡೆಯಲಿದ್ದು ಸಮಾಜ ಕಲ್ಯಾಣ ಸಚಿವ ಎಚ್ ಸಿ ಮಹದೇವಪ್ಪ ರವರು ಅಂಬೇಡ್ಕರ್ ಭವನವನ್ನು ಉದ್ಘಾಟಿಸಲಿದ್ದಾರೆ ಗೃಹ ಸಚಿವ ಜಿ ಪರಮೇಶ್ವರ್, ಅವರು ಮುಖ್ಯ ಭಾಷಣಕಾರರಾಗಿ ಆಗಮಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಗ್ರಾಮೀಣ ಅಭಿವೃದ್ಧಿ ಸಚಿವ ಪ್ರಿಯಾಂಕ ಖರ್ಗೆ ಕೊಳ್ಳೇಗಾಲ ಶಾಸಕ ಎ.ಆರ್.ಕೃಷ್ಣಮೂರ್ತಿ ಸಂಸದ ಸುನಿಲ್ ಬೋಸ್ ರವರು ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು ಇದಕ್ಕೂ ಮೊದಲು ಅಂದು ಬೆಳಿಗ್ಗೆ ಬೀಮನಗರದಿಂದ ಮೆರವಣಿಗೆ ಹೊರಟು ಅಂಬೇಡ್ಕರ್ ಪುತಳಿ ಗೆ ಮಾಲಾರ್ಪಣೆ ಮಾಡಿ ಪ್ರಮುಖ ಬೀದಿಗಳಲ್ಲಿ ಅಂಬೇಡ್ಕರ್ ಭವನ ತಲುಪಲಿದೆ ನಂತರ ವೇದಿಕೆ ಕಾರ್ಯಕ್ರಮಗಳು ನಡೆಯಲಿದೆ. ಇದು ಭೀಮ ನಗರದ ಹೆಮ್ಮೆಯ ಕಾರ್ಯಕ್ರಮವಾಗಿದ್ದು ಸಮುದಾಯದ ಮುಖಂಡರು ಯಜಮಾನರು ಭವನ ಉದ್ಘಾಟನೆ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಉತ್ಸಹಿತರಾಗಿದ್ದಾರೆ ಎಂದು ಈ ಸಂದರ್ಭದಲ್ಲಿ ಹರ್ಷ ವ್ಯಕ್ತಪಡಿಸಿದರು ಈ ಕಾರ್ಯಕ್ರಮಕ್ಕೆ ಜಿಲ್ಲೆಯ ಹಾಲಿ ಹಾಗೂ ಮಾಜಿ ಶಾಸಕರುಗಳು ಚುನಾಯಿತ ಪ್ರತಿನಿಧಿಗಳು ವಿವಿಧ ಸಮುದಾಯಗಳ ಮುಖಂಡರುಗಳು ಹಾಗೂ ಜಿಲ್ಲೆಯ ಎಲ್ಲಾ ಅಂಬೇಡ್ಕರ್ ಸಂಘಗಳ ಪದಾಧಿಕಾರಿಗಳು ಅಂಬೇಡ್ಕರ್ ಅನುಯಾಯಿಗಳು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು. ಭೀಮ ನಗರದ ಯಜಮಾನ ಚಿಕ್ಕಮಾಳಿಗೆ ಮಾತನಾಡಿ ಅಂದಿನ ಕಾರ್ಯಕ್ರಮವನ್ನು ಜಿಲ್ಲಾಡಳಿತ ಅಚ್ಚುಕಟ್ಟಾಗಿ ನಡೆಸಲು ಮುಂದಾಗಿದ್ದು ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದೆ. ಜಿಲ್ಲಾಡಳಿತ ನಡೆಸುವ ಕಾರ್ಯಕ್ರಮಕ್ಕೆ ಸಮುದಾಯದ ಮುಖಂಡರು ಯಜಮಾನರುಗಳು ಸಾಥ್ ನೀಡಲಿದ್ದಾರೆ.ಹಾಗೂ ಅಂದು ಉದ್ಘಾಟನೆ ಯಾಗಲಿರುವ ಭವನದ ಮುಂದುವರಿದ ಕಾಮಗಾರಿನಡೆಯಲಿದ್ದುಕಾಮಗಾರಿ ಸಂಪೂರ್ಣ ಮುಗಿದ ಬಳಿಕ ಜನವರಿ ನಂತರ ಸರ್ವಜನಿಕರ ಸೇವೆಗೆ ದೊರಕಲಿದೆ ಎಂದರು. ಪತ್ರಿಕಾ ಗೋಷ್ಟಿಯಲ್ಲಿ ಅಂಬೇಡ್ಕರ್ ಸಂಘದ ಪ್ರಧಾನ ಕಾರ್ಯದರ್ಶಿ ಪಾಪಣ್ಣ, ಉಪಾಧ್ಯಕ್ಷ ಕಿರಣ್, ಸಹಕಾರ್ಯದರ್ಶಿ ಶಶಿಕುಮಾರ್, ಖಜಾಂಚಿ ರಾಜೇಶ್, ನಿರ್ದೇಶಕರುಗಳಾದ ಎನ್. ನಟರಾಜ್., ಎಂ ಮರಿಸ್ವಾಮಿ, ಪಿ ಕೃಷ್ಣರಾಜು, ಮಣಿ, ಪುಟ್ಟಲಿಂಗಯ್ಯ, ಭೀಮನಗರದ ಯಜಮಾನರುಗಳಾದ ಮಹದೇವಸ್ವಾಮಿ, ಆನಂದ್ ಮುಖಂಡರುಗಳಾದ ನಾಗರಾಜು, ಲಿಂಗರಾಜು,ವಕೀಲ ಹರ್ಷ ಇತರರು ಹಾಜರಿದ್ದರು.
ಕೊಳ್ಳೇಗಾಲ = .ಇದೇ ತಿಂಗಳು ನ. 29 ಕ್ಕೆ ಅಂಬೇಡ್ಕರ್ ಭವನವನ್ನು ಲೋಕಾರ್ಪಣೆ ಮಾಡಲಾಗುವುದು ಎಂದು ಡಾ! ಬಿ. ಆರ್. ಅಂಬೇಡ್ಕರ್ ಸ್ಮಾರಕ ಸಂಘದ ಅಧ್ಯಕ್ಷ ಆನಂದ್ ಮೂರ್ತಿ ತಿಳಿಸಿದರು. ಈ ಸಂಬಂಧ ಪಟ್ಟಣದ ನೂತನ ಅಂಬೇಡ್ಕರ್ ಭವನದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಪಟ್ಟಣದ ಭೀಮನಗರದ ಬಹು ದಿನಗಳ ಕನಸು ಈ ತಿಂಗಳ ಅಂತ್ಯದಲ್ಲಿ ನನಸಾಗುವ ಕಾಲ ಕೂಡಿಬಂದಿದೆ. ಕಳೆದ ಹಲವಾರು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಅಂಬೇಡ್ಕರ್ ಭವನ ಉದ್ಘಾಟನೆ ಆಗುತ್ತಿರುವುದು ನಮ್ಮ ಸಮುದಾಯದ ಜನರಲ್ಲಿ ಹರ್ಷ ತಂದಿದೆ ಎಂದರು ಎಲ್ಲಾ ಕಾರ್ಯಕ್ರಮಗಳು ಚೇತವನದ ಮನೋರಖಿತ ಬಂತೇಜಿ ಮೈಸೂರಿನ ಉರಿಲಿಂಗಿ ಪೆದ್ದಿ ಮಠದಜ್ಞಾನ ಪ್ರಕಾಶ್ ಸ್ವಾಮೀಜಿಗಳ ದಿವ್ಯ ಸಾನ್ವಿಧ್ಯದಲ್ಲಿ ನಡೆಯಲಿದ್ದು ಸಮಾಜ ಕಲ್ಯಾಣ ಸಚಿವ ಎಚ್ ಸಿ ಮಹದೇವಪ್ಪ ರವರು ಅಂಬೇಡ್ಕರ್ ಭವನವನ್ನು ಉದ್ಘಾಟಿಸಲಿದ್ದಾರೆ ಗೃಹ ಸಚಿವ ಜಿ ಪರಮೇಶ್ವರ್, ಅವರು ಮುಖ್ಯ ಭಾಷಣಕಾರರಾಗಿ ಆಗಮಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಗ್ರಾಮೀಣ ಅಭಿವೃದ್ಧಿ ಸಚಿವ ಪ್ರಿಯಾಂಕ ಖರ್ಗೆ ಕೊಳ್ಳೇಗಾಲ ಶಾಸಕ ಎ.ಆರ್.ಕೃಷ್ಣಮೂರ್ತಿ ಸಂಸದ ಸುನಿಲ್ ಬೋಸ್ ರವರು ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು ಇದಕ್ಕೂ ಮೊದಲು ಅಂದು ಬೆಳಿಗ್ಗೆ ಬೀಮನಗರದಿಂದ ಮೆರವಣಿಗೆ ಹೊರಟು ಅಂಬೇಡ್ಕರ್ ಪುತಳಿ ಗೆ ಮಾಲಾರ್ಪಣೆ ಮಾಡಿ
ಪ್ರಮುಖ ಬೀದಿಗಳಲ್ಲಿ ಅಂಬೇಡ್ಕರ್ ಭವನ ತಲುಪಲಿದೆ ನಂತರ ವೇದಿಕೆ ಕಾರ್ಯಕ್ರಮಗಳು ನಡೆಯಲಿದೆ. ಇದು ಭೀಮ ನಗರದ ಹೆಮ್ಮೆಯ ಕಾರ್ಯಕ್ರಮವಾಗಿದ್ದು ಸಮುದಾಯದ ಮುಖಂಡರು ಯಜಮಾನರು ಭವನ ಉದ್ಘಾಟನೆ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಉತ್ಸಹಿತರಾಗಿದ್ದಾರೆ ಎಂದು ಈ ಸಂದರ್ಭದಲ್ಲಿ ಹರ್ಷ ವ್ಯಕ್ತಪಡಿಸಿದರು ಈ ಕಾರ್ಯಕ್ರಮಕ್ಕೆ ಜಿಲ್ಲೆಯ ಹಾಲಿ ಹಾಗೂ ಮಾಜಿ ಶಾಸಕರುಗಳು ಚುನಾಯಿತ ಪ್ರತಿನಿಧಿಗಳು ವಿವಿಧ ಸಮುದಾಯಗಳ ಮುಖಂಡರುಗಳು ಹಾಗೂ ಜಿಲ್ಲೆಯ ಎಲ್ಲಾ ಅಂಬೇಡ್ಕರ್ ಸಂಘಗಳ ಪದಾಧಿಕಾರಿಗಳು ಅಂಬೇಡ್ಕರ್ ಅನುಯಾಯಿಗಳು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು. ಭೀಮ ನಗರದ ಯಜಮಾನ ಚಿಕ್ಕಮಾಳಿಗೆ ಮಾತನಾಡಿ ಅಂದಿನ ಕಾರ್ಯಕ್ರಮವನ್ನು ಜಿಲ್ಲಾಡಳಿತ ಅಚ್ಚುಕಟ್ಟಾಗಿ ನಡೆಸಲು ಮುಂದಾಗಿದ್ದು ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದೆ. ಜಿಲ್ಲಾಡಳಿತ ನಡೆಸುವ ಕಾರ್ಯಕ್ರಮಕ್ಕೆ ಸಮುದಾಯದ ಮುಖಂಡರು ಯಜಮಾನರುಗಳು ಸಾಥ್ ನೀಡಲಿದ್ದಾರೆ.ಹಾಗೂ ಅಂದು ಉದ್ಘಾಟನೆ ಯಾಗಲಿರುವ ಭವನದ ಮುಂದುವರಿದ ಕಾಮಗಾರಿನಡೆಯಲಿದ್ದುಕಾಮಗಾರಿ ಸಂಪೂರ್ಣ ಮುಗಿದ ಬಳಿಕ ಜನವರಿ ನಂತರ ಸರ್ವಜನಿಕರ ಸೇವೆಗೆ ದೊರಕಲಿದೆ ಎಂದರು. ಪತ್ರಿಕಾ ಗೋಷ್ಟಿಯಲ್ಲಿ ಅಂಬೇಡ್ಕರ್ ಸಂಘದ ಪ್ರಧಾನ ಕಾರ್ಯದರ್ಶಿ ಪಾಪಣ್ಣ, ಉಪಾಧ್ಯಕ್ಷ ಕಿರಣ್, ಸಹಕಾರ್ಯದರ್ಶಿ ಶಶಿಕುಮಾರ್, ಖಜಾಂಚಿ ರಾಜೇಶ್, ನಿರ್ದೇಶಕರುಗಳಾದ ಎನ್. ನಟರಾಜ್., ಎಂ ಮರಿಸ್ವಾಮಿ, ಪಿ ಕೃಷ್ಣರಾಜು, ಮಣಿ, ಪುಟ್ಟಲಿಂಗಯ್ಯ, ಭೀಮನಗರದ ಯಜಮಾನರುಗಳಾದ ಮಹದೇವಸ್ವಾಮಿ, ಆನಂದ್ ಮುಖಂಡರುಗಳಾದ ನಾಗರಾಜು, ಲಿಂಗರಾಜು,ವಕೀಲ ಹರ್ಷ ಇತರರು ಹಾಜರಿದ್ದರು.
- User8673Srinivaspur, Kolar🤝on 13 November
- ಅಂದಿನಿಂದ ಇಂದಿ ನವರೆಗೂ ಪ್ರತಿ ವರ್ಷ ಕೂಡ ಯುಗಾದಿ ಹಬ್ಬದ ನಂತರ ಬಸವೇಶ್ವರ ಸ್ವಾಮಿಗೆ ವಿಶೇಷ ಪೂಜೆ ನಡೆದುಕೊಂಡು ಬರುತ್ತಿದೆ. ಬಸವೇಶ್ವರ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಸಂಪ್ರದಾಯಿಕವಾಗಿ ಅರ್ಚಕರು ಬೆಳಗ್ಗೆಯಿಂದ ಉಪವಾಸ ಇದ್ದು, ಸ್ವಾಮಿಗೆ ವಿಶೇಷ ಪೂಜೆ, ಪಂಚಾಮೃತ ಅಭಿಷೇಕ ನೆರವೇರಿಸಿದರು. ದಟ್ಟವಾದ ಅರಣ್ಯ ಪ್ರದೇಶದ ಮಧ್ಯೆ ಇರುವ ಅರಳಿಮರದ ಕೆಳಗೆ ಬಸವೇಶ್ವರ ಸ್ವಾಮಿಯ ಲಿಂಗಕ್ಕೆ ಪೂರ್ವಜರು ಪೂಜೆ ಮಾಡಿಕೊಂಡು ಬರುತ್ತಿದ್ದರು. ಅಲ್ಲಿಂದ ಪಚ್ಚೇದೊಡ್ಡಿ ಗ್ರಾಮದಲ್ಲಿ ಬಸವೇಶ್ವರ ಸ್ವಾಮಿಯ ಲಿಂಗಾವನ್ನ ಪ್ರತಿಷ್ಠಾಪನೆ ಮಾಡಿ. ಪ್ರತಿ ವರ್ಷ ಕೂಡ ವಿಶೇಷ ಪೂಜೆ ನೆರವೇರಿಸಿಕೊಂಡು ಬಂದಿರುತ್ತಾರೆ. ಕಾಂಚಳ್ಳಿ ಗ್ರಾಮದಿಂದ ಜಡೆಸ್ವಾಮಿ (ಶಿವನ ಪ್ರತಿರೂಪ ) ದೇವರನ್ನ ಪಚ್ಚೇದೊಡ್ಡಿಗೆ ತಂದು ವಿಶೇಷ ಪೂಜೆ ಪುನಸ್ಕಾರಗಳನ್ನ ಮಾಡುತ್ತಾರೆ. ತಳಿರು ತೋರಣಗಳಿಂದ ಸಿಂಗರಿಸಿ, ದೇವರಿಗೆ ವಿವಿಧ ಪುಷ್ಪಗಳಿಂದ ಅಲಂಕಾರ ಮಾಡಲಾಗುತ್ತದೆ. ಎಸ್. ಎ. ಸೌಂಡ್ಸ್ ಸಿಸ್ಟಮ್ ವತಿಯಿಂದ ಪಚ್ಚೆದೊಡ್ಡಿ ಗ್ರಾಮದ ದೇವಾಲಯದ ಸುತ್ತಮುತ್ತ ವಿದ್ಯುತ್ ದೀಪ ಅಲಂಕಾರಗಳಿಂದ ಅಲಂಕಾರ ಮಾಡಲಾಗಿತ್ತು. ಭಕ್ತರಿಗೆ ಅನ್ನ ದಾನ ವಿಶೇಷ ಪೂಜೆ ನಡೆದ ನಂತರ ರಾತ್ರಿ 8 ಗಂಟೆಗೆ ನೆರೆದಿರುವ ಭಕ್ತರಿಗೆ ಪಾಯಸ, ಮುದ್ದೆ, ದ್ವಿದಳ ದಾನ್ಯದ ಸಾಂಬಾರು, ಪಲ್ಯ, ಹಪ್ಪಳ,ಅನ್ನಸಾಂಬಾರ್ ಅನ್ನು ನೆರೆದಿರುವ ಭಕ್ತರಿಗೆ ಅನ್ನದಾನದ ವ್ಯವಸ್ಥೆಯನ್ನ ಕಲ್ಪಿಸಿದರು. ನಟರಾಜ್ ಮೈಸೂರು ತಂಡದವರಿಂದ ರಾತ್ರಿ 10 ರಿಂದ ಬೆಳಿಗ್ಗೆ 4 ರವರೆಗೆ ಹರಿಕಥೆ ನಡೆಸಲಾಯಿತು. ಇದೇ ಸಂದರ್ಭದಲ್ಲಿ ಬಸವೇಶ್ವರ ಸ್ವಾಮಿಯ ಅರ್ಚಕ ಬಸವರಾಜು, ಅರ್ಚಕರಾದ ಶಿವು, ಶ್ರೀನಿವಾಸ್, ಗೌಡರದ ಮನ್ನಾರ್ ಕೃಷ್ಣೆಗೌಡ, ಕೃಷ್ಣೆಗೌಡ,ನಾಗರಾಜು, ರಾಜು, ಗಣೇಶ್, ಮಾದೇವ, ಜಡೆಸ್ವಾಮಿ,ಕುಮಾರ್, ಗಾವಳಿ ರಾಜು ಹಾಗೂ ಸುತ್ತ ಮುತ್ತಲಿನ ಗ್ರಾಮಸ್ಥರು ಇದ್ದರು.4
- ತುಮಕೂರು: ಸಮಾಜಸೇವೆ ಮತ್ತು ದಾನಧರ್ಮದ ಪ್ರತೀಕವಾಗಿದ್ದ ತ್ರಿವಿಧ ದಾಸೋಹಿ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿಯವರ 119ನೇ ವರ್ಷದ ಹುಟ್ಟುಹಬ್ಬದ ಅಂಗವಾಗಿ ಸಿದ್ದಗಂಗಾ ಮಠದಲ್ಲಿ ಭಕ್ತಿಭಾವದ ಕಾರ್ಯಕ್ರಮಗಳು ಜರುಗಿದವು. ಈ ಸಂದರ್ಭದಲ್ಲಿ ಮೈಸೂರು ಮೂಲದ ಪುನೀತ್ ಕಲಾವಿದ ತಂಡ ವಿಶೇಷವಾಗಿ 8000 ಚದರ ಅಡಿ ವಿಸ್ತೀರ್ಣದ ಬೃಹತ್ ರಂಗೋಲಿ ರಚಿಸಿ ಗಮನ ಸೆಳೆದಿತು. ಸಿದ್ದಗಂಗಾ ಮಠದ ಆವರಣದಲ್ಲಿ ಮೂಡಿಬಂದ ಈ ಅದ್ಭುತ ರಂಗೋಲಿಯಲ್ಲಿ ಶಿವಕುಮಾರ ಸ್ವಾಮೀಜಿಯವರ ಭಾವಚಿತ್ರವನ್ನು ಅತ್ಯಂತ ಕಲಾತ್ಮಕವಾಗಿ ರೂಪಿಸಲಾಗಿದ್ದು, ಭಕ್ತರು ಹಾಗೂ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದರು. ಬಣ್ಣಗಳ ಸಮನ್ವಯ, ವಿನ್ಯಾಸದ ನಿಖರತೆ ಹಾಗೂ ಆಧ್ಯಾತ್ಮಿಕ ಭಾವನೆಗಳನ್ನು ಪ್ರತಿಬಿಂಬಿಸುವ ರೀತಿಯಲ್ಲಿ ರಂಗೋಲಿ ಸಿದ್ಧಗೊಂಡಿತ್ತು. ಈ ಮಹತ್ವದ ಕಲಾಕೃತಿಯನ್ನು ಮೈಸೂರು ನಗರದ ಪುನೀತ್ ಕಲಾವಿದ ತಂಡದ ಕಲಾವಿದರು ಶ್ರಮಪಟ್ಟು ರೂಪಿಸಿದ್ದಾರೆ. ತಂಡದ ಪ್ರಮುಖ ಕಲಾವಿದರಾದ ಪುನೀತ್ ಕಲಾವಿದ, ಲಕ್ಷ್ಮಿ ಸಿ, ಆದಿತ್ಯ ಪಿ, ಹರ್ಷಿತ್ ಆರ್, ಹಾಗೂ ಕುಮಾರಸ್ವಾಮಿ ಕೆ.ಬಿ ಅವರು ಹಲವು ದಿನಗಳ ಪರಿಶ್ರಮದಿಂದ ರಂಗೋಲಿಯನ್ನು ಸಿದ್ಧಗೊಳಿಸಿದರು. ಅವರ ಕಲಾತ್ಮಕ ಪ್ರತಿಭೆಗೆ ಮಠದ ಭಕ್ತರು ಹಾಗೂ ಭೇಟಿ ನೀಡಿದವರು ಶ್ಲಾಘನೆ ವ್ಯಕ್ತಪಡಿಸಿದರು. ಶ್ರೀ ಶಿವಕುಮಾರ ಸ್ವಾಮೀಜಿಯವರು ಶಿಕ್ಷಣ, ಅನ್ನದಾನ ಮತ್ತು ಮಾನವೀಯ ಸೇವೆಗಳ ಮೂಲಕ ಸಮಾಜಕ್ಕೆ ನೀಡಿದ ಕೊಡುಗೆ ಅಪಾರವಾಗಿದೆ. ಅವರ ಸ್ಮರಣಾರ್ಥವಾಗಿ ಕಲೆಯ ಮೂಲಕ ಗೌರವ ಸಲ್ಲಿಸುವುದು ವಿಶೇಷವಾಗಿದೆ ಎಂದು ಭಕ್ತರು ಅಭಿಪ್ರಾಯಪಟ್ಟರು. ರಂಗೋಲಿ ವೀಕ್ಷಿಸಲು ರಾಜ್ಯದ ವಿವಿಧ ಭಾಗಗಳಿಂದ ಭಕ್ತರು ಆಗಮಿಸಿ, ಕಲಾವಿದರ ಕಾರ್ಯವನ್ನು ಪ್ರಶಂಸಿಸಿದರು. ಸಿದ್ದಗಂಗಾ ಮಠದ ಆವರಣವು ಆಧ್ಯಾತ್ಮಿಕ ವಾತಾವರಣದೊಂದಿಗೆ ಕಲಾ ಸಂಭ್ರಮದ ಕೇಂದ್ರವಾಗಿತ್ತು. ಶಿವಕುಮಾರ ಸ್ವಾಮೀಜಿಯವರ ಆದರ್ಶಗಳು ಯುವಜನತೆಗೆ ಸ್ಪೂರ್ತಿಯಾಗಲಿ ಎಂಬ ಸಂದೇಶದೊಂದಿಗೆ ಪುನೀತ್ ಕಲಾವಿದ ತಂಡ ಈ ಬೃಹತ್ ರಂಗೋಲಿ ಮೂಲಕ ತಮ್ಮ ಭಕ್ತಿಯನ್ನು ವ್ಯಕ್ತಪಡಿಸಿದೆ. ಈ ಕಲಾಕೃತಿ ಮಠದ ಕಾರ್ಯಕ್ರಮಗಳಲ್ಲಿ ಪ್ರಮುಖ ಆಕರ್ಷಣೆಯಾಗಿತ್ತು.1
- Post by Md Aleemulla Shariff1
- ಮಳವಳ್ಳಿ ಸಾರಥಿ ಯೋಜನೆ ಅಡಿಯಲ್ಲಿ 17 ನಿರುದ್ಯೋಗಿ ಯುವಕರಿಗೆ ಕಾರು ವಿತರಣೆ ಹಿಂದುಳಿದ ವರ್ಗಗಳ ಇಲಾಖೆ ವತಿಯಿಂದ 22 ಮಹಿಳೆಯರಿಗೆ ಹೊಲಿಗೆ ಯಂತ್ರ 112 ಮ0ದಿಗೆ ನೇರ ಸಾಲ ಸೌಲಭ್ಯ,58 ಮಂದಿಗೆ ಗಂಗಾ ಕಲ್ಯಾಣ ಯೋಜನೆಯ ಸೌಲಭ್ಯ ವಿತರಣೆ ಕಾರ್ಯಕ್ರಮ ಪಟ್ಟಣದ ಡಾ. ಬಿಆರ್ ಅಂಬೇಡ್ಕರ್ ಭವನದಲ್ಲಿ ಸೋಮವಾರ ಜರಗಿತು ಕಾರ್ಯಕ್ರಮವನ್ನು ಶಾಸಕರಾದ ನರೇಂದ್ರಸ್ವಾಮಿ ಉದ್ಘಾಟಿಸಿ ಸವಲತ್ತುಗಳು ಗಳನ್ನು ಇತರಿಸಿ ಮಾತನಾಡಿದರು1
- ಖಂಡಿತ, ನೀವು ನೀಡಿದ ಮಾಹಿತಿಯ ಆಧಾರದ ಮೇಲೆ ದಿನಪತ್ರಿಕೆಯ ವರದಿ ಇಲ್ಲಿದೆ: ಮಾಗಡಿ: ಕೆಂಪೇಗೌಡರ ಪ್ರತಿಮೆ ಸ್ಥಳಾಂತರಕ್ಕೆ ಎಚ್.ಎಂ. ಕೃಷ್ಣಮೂರ್ತಿ ತೀವ್ರ ವಿರೋಧ ಮಾಗಡಿ: ಪಟ್ಟಣದ ಅಸ್ಮಿತೆಯಾಗಿರುವ ಕೆಂಪೇಗೌಡರ ಪ್ರತಿಮೆಯನ್ನು ಅಭಿವೃದ್ಧಿಯ ನೆಪದಲ್ಲಿ ಸ್ಥಳಾಂತರಿಸಲು ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಎಂದು ಕೆಂಪೇಗೌಡ ಅಭಿವೃದ್ಧಿ ಸಮಿತಿ ರಾಜ್ಯಾಧ್ಯಕ್ಷ ಎಚ್.ಎಂ. ಕೃಷ್ಣಮೂರ್ತಿ ಎಚ್ಚರಿಸಿದ್ದಾರೆ. ಮಂಗಳವಾರ ಪಟ್ಟಣದ ಕೆಂಪೇಗೌಡ ಪ್ರತಿಮೆ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಧಿಕಾರಿಗಳು ಹಾಗೂ ಸ್ಥಳೀಯ ಜನಪ್ರತಿನಿಧಿಗಳ ನಡೆಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಅಭಿವೃದ್ಧಿಯ ಹೆಸರಲ್ಲಿ ವಿನಾಶ ಸರಿಯಲ್ಲ "ಹೈಕೋರ್ಟ್ ಸೂಚನೆಯ ಮೇರೆಗೆ ಪ್ರತಿಮೆ ತೆರವುಗೊಳಿಸುವ ಬಗ್ಗೆ ಏಪ್ರಿಲ್ 4ರಂದು ಪುರಸಭೆಯಲ್ಲಿ ಸಭೆ ಕರೆಯಲಾಗಿದೆ. ಈ ಸಭೆಯಲ್ಲಿ ನಾನು ಭಾಗವಹಿಸಿ ನನ್ನ ಖಡಕ್ ವಿರೋಧ ದಾಖಲಿಸುತ್ತೇನೆ. ಸರ್ಕಾರಿ ಆಸ್ಪತ್ರೆ ನಿರ್ಮಿಸುವ ನೆಪದಲ್ಲಿ ಉದ್ದೇಶಪೂರ್ವಕವಾಗಿ ಪ್ರತಿಮೆ ತೆರವುಗೊಳಿಸಲು ಮುಂದಾಗಿರುವುದು ಸರಿಯಲ್ಲ. ಈ ಪ್ರತಿಮೆಯಿಂದ ಅಥವಾ ಇಲ್ಲಿರುವ ನೂರಾರು ಮರಗಳಿಂದ ಅಭಿವೃದ್ಧಿಗೆ ಯಾವ ತೊಂದರೆಯಾಗಿದೆ?" ಎಂದು ಅವರು ಪ್ರಶ್ನಿಸಿದರು. ತೆರವುಗೊಳಿಸಿದ ಕಟ್ಟಡಗಳು ಎಲ್ಲಿವೆ? ಈಗಾಗಲೇ ಪಟ್ಟಣದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಭವನ, ಪಶು ಇಲಾಖೆ, ಗುರುಭವನ ಹಾಗೂ ತರಕಾರಿ ಮಾರುಕಟ್ಟೆಗಳನ್ನು ಅಭಿವೃದ್ಧಿಯ ಹೆಸರಲ್ಲಿ ತೆರವುಗೊಳಿಸಲಾಗಿದೆ. ಆದರೆ, ಇಷ್ಟು ದಿನಗಳಾದರೂ ಅವುಗಳನ್ನು ಮರುನಿರ್ಮಾಣ ಮಾಡಿಲ್ಲ. ಈಗ 40 ಕೋಟಿ ವೆಚ್ಚದಲ್ಲಿ ತಾಲೂಕು ಕಚೇರಿ ಒಡೆದು ಹೊಸ ಆಸ್ಪತ್ರೆ ಕಟ್ಟುವ ಅಗತ್ಯವೇನಿದೆ? ಎಂದು ಪ್ರಶ್ನಿಸಿದ ಅವರು, "ಈಗಿರುವ ಆಸ್ಪತ್ರೆಯಲ್ಲೇ ಸರಿಯಾದ ವೈದ್ಯರಿಲ್ಲ, ಶಸ್ತ್ರಚಿಕಿತ್ಸೆಗಳು ನಡೆಯುತ್ತಿಲ್ಲ. ಮೊದಲು ಅದನ್ನು ಸರಿಪಡಿಸಲಿ," ಎಂದರು. ದ್ವೇಷದ ರಾಜಕಾರಣದ ಆರೋಪ "ಎಚ್.ಎಂ. ಕೃಷ್ಣಮೂರ್ತಿ ಕೆಂಪೇಗೌಡರ ಹೆಸರಿನಲ್ಲಿ ಸಮಾಜಮುಖಿ ಕೆಲಸ ಮಾಡಬಾರದು ಎಂಬ ದ್ವೇಷದಿಂದ ಈ ಪಿತೂರಿ ನಡೆಯುತ್ತಿದೆ. ಪಟ್ಟಣದ ಗಬ್ಬು ನಾರುತ್ತಿರುವ ಶೌಚಾಲಯಗಳನ್ನು ಸರಿಪಡಿಸಲಿ, ಮಹಿಳೆಯರಿಗೆ ಅನುಕೂಲ ಮಾಡಿಕೊಡಲಿ. ಅದನ್ನು ಬಿಟ್ಟು ಇತಿಹಾಸವಿರುವ ಗೌರಮ್ಮನಕೆರೆ ಅಭಿವೃದ್ಧಿಯ ಹೆಸರಲ್ಲಿ ಮಣ್ಣು ಮಾರಿಕೊಳ್ಳುವ ಕೀಳು ಮಟ್ಟಕ್ಕೆ ಇಳಿಯಬಾರದು," ಎಂದು ಶಾಸಕರ ಹೆಸರು ಪ್ರಸ್ತಾಪಿಸದೆ ಲೇವಡಿ ಮಾಡಿದರು. ದಶಕಗಳ ಸೇವೆಗೆ ಕುತ್ತು ದಲಿತ ಮುಖಂಡ ಸಿ. ಜಯರಾಮು ಮಾತನಾಡಿ, "ಕೃಷ್ಣಮೂರ್ತಿಯವರು ಕಳೆದ 23 ವರ್ಷಗಳಿಂದ ಯಾವುದೇ ಸರ್ಕಾರಿ ಸಹಾಯವಿಲ್ಲದೆ ಕೆಂಪೇಗೌಡರ ಪ್ರತಿಮೆ ಸ್ಥಾಪಿಸಿ, ಉಚಿತ ಸಾಮೂಹಿಕ ವಿವಾಹ, ಆರೋಗ್ಯ ಶಿಬಿರಗಳಂತಹ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬಂದಿದ್ದಾರೆ. ಅಂತಹ ಪ್ರತಿಮೆಯನ್ನು ತೆರವುಗೊಳಿಸಲು ಮುಂದಾಗಿರುವುದು ದ್ವೇಷದ ರಾಜಕಾರಣದ ಪರಮಾವಧಿ," ಎಂದು ಟೀಕಿಸಿದರು. ಗೋಷ್ಠಿಯಲ್ಲಿ ಮರೂರು ಸಾಗರ್ ಗೌಡ, ಶಂಕ್ರಪ್ಪ, ಕನ್ನಡ ಸಂಘಟನೆಯ ರಂಗೇಶ್, ಮೋಹನ್, ಜೋಡುಗಟ್ಟೆ ರಮೇಶ್, ದೊಡ್ಡಿ ಗೋಪಿ, ಪರಿಸರ ರಕ್ಷಣಾ ಸಮಿತಿ ಅಧ್ಯಕ್ಷ ಶಿವಲಿಂಗಯ್ಯ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.1
- ಅರಕಲಗೂಡು : ಪುಣ್ಯ ಕ್ಷೇತ್ರ ಧರ್ಮಸ್ಥಳ ಹಾಗು ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದ ದರ್ಶನಕ್ಕೆ ಅನುಕೂಲವಾಗುವಂತೆ ಧರ್ಮಸ್ಥಳ ದಿಂದ ಮೈಸೂರಿಗೆ ನೇರ ಬಸ್ ವ್ಯವಸ್ಥೆಯನ್ನು ಕಲ್ಪಿಸಲಾಗಿರುವುದನ್ನು ಸ್ವಾಗತಿಸಿ ಸಂತೆಮರೂರು ಗ್ರಾಮಸ್ಥರು ನೂತನ ಬಸ್ಗೆ ಪೂಜೆ ಸಲ್ಲಿಸಿ ಸಂಭ್ರಮಿಸಿದರು. ಇಂದು ಬೆಳಿಗ್ಗೆ 5-20ಕ್ಕೆ ಆಗಮಿಸಿದ ಸಾರಿಗೆ ಬಸ್ನ್ನು ಗ್ರಾಮಸ್ಥರು ತಡೆದು ಹೂವಿನ ಅಲಂಕಾರಗೊಳಿಸಿ ಪೂಜೆ ಸಲ್ಲಿಸಿದರು.ಅಲ್ಲದೆ ಕೆಲವರು ಬಸ್ ಏರಿ ಸುಬ್ರಹ್ಮಣ್ಯ,ಧರ್ಮಸ್ಥಳಕ್ಕೆ ಪ್ರಯಾಣ ಕೂಡ ಆರಂಭಿಸಿದರು. ಈ ನೂತ ಬಸ್ ನಿತ್ಯವೂ ಬಿಸಿಲೆ ಘಾಟ್ ಮೂಲಕ ಅರಕಲಗೂಡು ಸಂತೆಮರೂರು,ಜೋಡಿಗುಬ್ಬಿ,ಹಳ್ಳಿಮೈಸೂರು,ಭೇರ್ಯ,ಕೆ.ಆರ್.ಮಾರ್ಗವಾಗಿ ಮೈಸೂರಿಗೆ ತೆರಳಲಿ ತಂಗಲಿದೆ.ಪುನಃ ಬೆಳಗ್ಗೆ 6ಗಂಟೆಗೆ ಮೈಸೂರಿನಿಂದ ಹೊರಟು ಅದೇ ಮಾರ್ಗವಾಗಿ ಸಂಚರಿಸಿ ಕುಕ್ಕೆ ಸುಬ್ರಹ್ಮಣ್ಯ ಮೂಲಕ ಧರ್ಮಸ್ಥಳಕ್ಕೆ ತೆರಳಲಿದೆ. ನಿತ್ಯವೂ ತಾಲೂಕಿನಿಂದ ಕುಕ್ಕೆ ಸುಬ್ರಹ್ಮಣ್ಯ,ಧರ್ಮಸ್ಥಳಕ್ಕೆ ಪ್ರಯಾಣಿಕರು ಹೋಗಿಬರುತ್ತಿದ್ದು,ಈ ನೂತನ ಸಾರಿಗೆ ಬಸ್ ಅತೀ ಸಮೀಪ ಮಾರ್ಗದಲ್ಲಿ ಇರುವ ಕಾರಣ ಹೆಚ್ಚಿನ ಪ್ರಯಾಣಿಕರು ಈ ಬಸ್ ಸೌಲಭ್ಯವನ್ನು ಪಡೆಯಲು ಅವಕಾಶ ದೊರೆತಂತೆ ಆಗಿದೆ ಎಂದು ಪ್ರಯಾಣಿಕರು ಸಂತಸ ವ್ಯಕ್ತಪಡಿಸಿದರು. ಅರಕಲಗೂಡಿನಿಂದ ಸಂತೆಮರೂರು-ಜೋಡಿಗುಬ್ಬಿ,ಹಳ್ಳಿಮೈಸೂರು ಮಾರ್ಗವಾಗಿ ಮೈಸೂರಿಗೆ ತೆರಳಲು ಸಕಾಲಿಕವಾಗಿ ಸಾರಿಗೆ ಬಸ್ ಸೇವೆಯಿಂದ ತ್ಭಾಗದ ಹತ್ತಾರು ಹಳ್ಳಿಗಳ ಜನರು ವಂಚನೆಗೊಂಡಿದ್ದರು.ಈ ಮಾರ್ಗ ಅರಕಲಗೂಡಿನಿಂದ ಮೈಸೂರಿಗೆ ಸಂಚರಿಸುವ ಪ್ರಯಾಣಿಕರಿಗೆ ಅತೀ ಸಮೀಪವಾಗಿತ್ತು.ಅಲ್ಲದೆ ಬೆಳಕಿನ ವೇಳೆ ಬಿಸಿಲೆ ಘಾಟ್ ಸೌಂಧರ್ಯವನ್ನು ಸವಿಯಲು ಮತ್ತೊಂದು ಅವಕಾಶ ದೊರೆತಂತ್ತಾಗಿದೆ.ಈ ಅವಕಾಶ ಮತ್ತು ಪ್ರಯಾಣಿಕರ ಸಮಸ್ಯೆಗೆ ಪರಿಹಾರ ಒದಗಿಸಿರುವ ಸಾರಿಗೆ ಸಂಸ್ಥೆ ಅಧಿಕಾರಿಗಳನ್ನು ಇಡೀ ಪ್ರಯಾಣಿಕರ ಪರವಾಗಿ ಸಂತೆಮರೂರು ಗ್ರಾಮಸ್ಥರು ಅಭಿನಂದಿಸುತ್ತೇವೆ ಎಂದರು. ಈ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ಶಾಂತರಾಜೇ ಅರಸು,ಮಲ್ಲರಾಜೇ ಅರಸು,ಕಾರ್ತಿಕ ಅರಸು,ಬಾಲರಾಜೇ ಅರಸು ಇತರರು ಇದ್ದರು. #dharmasthala #ksrtc1
- ಇವನು ಮನುಷ್ಯನಾ ಅಥವಾ ಮೃಗನಾ ಎಂಬ ಪ್ರಶ್ನೆ ಎಬ್ಬಿಸುವಷ್ಟು ಅಮಾನವೀಯ ಘಟನೆ ಮಹಾರಾಷ್ಟ್ರದ ವಸೈ ವೆಸ್ಟ್ನಲ್ಲಿ ನಡೆದಿದೆ. ಕ್ಷುಲ್ಲಕ ಜಗಳದ ಸಿಟ್ಟನ್ನು ನಾಲ್ಕು ವರ್ಷದ ಅಮಾಯಕ ಮಗುವಿನ ಮೇಲೆ ತೀರಿಸಿಕೊಂಡ ಆರೋಪಿಯ ಕ್ರೂರತೆ ದೇಶವನ್ನೇ ಬೆಚ್ಚಿಬೀಳಿಸಿದೆ. ಸಂದೀಪ್ ಪವಾರ್ ಎಂಬಾತ, ಮಗುವಿನ ಕಾಲುಗಳನ್ನು ಹಿಡಿದು ಗಾಳಿಯಲ್ಲಿ ಎತ್ತಿ ಬಲವಾಗಿ ನೆಲಕ್ಕೆ ಅಪ್ಪಳಿಸಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ನೆಲಕ್ಕೆ ಬಿದ್ದ ರಭಸಕ್ಕೆ ಮಗುವಿನ ತಲೆ ಸಮೀಪದ ರಿಕ್ಷಾಕ್ಕೆ ಬಡಿದಿದ್ದು, ಬಳಿಕ ಆರೋಪಿಯು ಮಗುವನ್ನು ಮತ್ತೆ ಎತ್ತಿಕೊಂಡು ಕಟ್ಟಡದ ಒಳಗೆ ಓಡಿದ್ದಾನೆ ಎನ್ನಲಾಗಿದೆ. ಘಟನೆ ವೈರಲ್ ಆಗುತ್ತಿದ್ದಂತೆ ಸಾರ್ವಜನಿಕರಲ್ಲಿ ಆಕ್ರೋಶದ ಅಲೆ ಎದ್ದಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ. ಗಾಯಾಳು ಮಗುವಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಮಗುವಿನ ಆರೋಗ್ಯದ ಬಗ್ಗೆ ತೀವ್ರ ಆತಂಕ ವ್ಯಕ್ತವಾಗಿದೆ.1
- Post by Md Aleemulla Shariff1