logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

udupi

on 7 November
user_Shuru User
Shuru User
Karkal, Udupi•
on 7 November

udupi

More news from Chikkamagaluru and nearby areas
  • ಕಡೂರು : ಏ.2ರಂದು ಕಡೂರಿನಲ್ಲಿ  ಜಿಲ್ಲಾ ಮಟ್ಟದ ಶ್ರೀ ದೇವರ ದಾಸಿಮಯ್ಯನವರ ಜಯಂತ್ಯೋತ್ಸವ ಸಮಾರಂಭವನ್ನು ಆದ್ದೂರಿಯಾಗಿ ಆಚರಿಸಲಾಗುವುದು ಎಂದು ದೇವರ ದಾಸಿಮಯ್ಯ ಆಚರಣೆ ಜಿಲ್ಲಾ ಸಮಿತಿಯ ಅಧ್ಯಕ್ಷ ಜೆ ಯೋಗೀಶ್ವರ ತಿಳಿಸಿದರು. ಪಟ್ಟಣದ ಬನಶಂಕರಿ ಕಲ್ಯಾಣ ಮಂಟಪದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಅಂದು ಪಟ್ಟಣದ ಗಣಪತಿ ಪೆಂಡಾಲ್ ಆವರಣದಲ್ಲಿ ಸಭಾ ಕಾರ್ಯಕ್ರಮವು ಮಧ್ಯಾಹ್ನ 12ಗಂಟೆಗೆ ಪ್ರಾರಂಭವಾಗಲಿದೆ. ಸಮಾರಂಭಕ್ಕೂ ಮುನ್ನಾ  ಬೆಳಿಗ್ಗೆ 10ಗಂಟೆಗೆ ಪಟ್ಟಣದ ವೆಂಕಟೇಶ್ವರ ದೇವಸ್ಥಾನದ ಆವರಣದಿಂದ ಪೆಂಡಾಲ್ ವರೆಗೂ ದೇವರದಾಸಿಮಯ್ಯ ಅವರ ಭಾವಚಿತ್ರದೊಂದಿಗೆ ವಿವಿಧ ಕಲಾತಂಡಗಳೊಂದಿಗೆ. ಮೆರವಣಿಗೆ ನಡೆಸಲಾಗುತ್ತದೆ. ಹಂಪೆ ಹೇಮಕೂಟದ  ಶ್ರೀ ದಯಾನಂದ ಪುರಿ ಸ್ವಾಮೀಜಿ, ಹಾಗೂ  ಮಹಾರಾಷ್ಟ್ರ ಸೊಲ್ಲಾಪುರದ ಶ್ರೀ ಡಾ. ಅಭಿನವ ರಾಮಲಿಂಗ ಪಟ್ಟದೇವರು ಹಾಗೂ ಜಿಲ್ಲೆಯ ಸಮಾಜ ಬಾಂಧವರು ಮೆರವಣಿಗೆಯಲ್ಲಿ ಭಾಗವಹಿಸಲಿದ್ದಾರೆ ಎಂದರು. ದೇವಾಂಗ ಸಂಘದ  ತಾಲೂಕು ಅಧ್ಯಕ್ಷ ಎಚ್.ಎಲ್. ರಂಗನಾಥ್ ಮಾತನಾಡಿ, ಜಿಲ್ಲೆಯಾದ್ಯಂತ  ಸಮಾಜದ ಬಂಧುಗಳು ಇರುವ ಗ್ರಾಮಗಳಿಗೆ ತೆರಳಿ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಲಾಗಿದೆ.  ಜಿಲ್ಲಾದ್ಯಂತ 5,000ಕ್ಕೂ ಹೆಚ್ಚು ಸಮಾಜ ಬಾಂಧವರು ಆಗಮಿಸುವ ನಿರೀಕ್ಷೆ ಇದೆ. ಈ ಮೂಲಕ ಸಮಾಜದ ಸಂಘಟನೆಗೆ ಹೆಚ್ಚಿನ ಒತ್ತು ನೀಡಿ ಕೆಲಸ ಮಾಡಲಾಗುವುದು. ಸಮಾವೇಶದಲ್ಲಿ ಪಟ್ಟಣದ ಪ್ರಖ್ಯಾತಿ ವೈದ್ಯರಾದ ಡಾ. ಛಾಯಾಪತಿ ಅವರಿಗೆ ದೇವಲ ಮಹರ್ಷಿ ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತದೆ ಎಂದರು. ದೇವಾಂಗ ಸಮಾಜದ ಕಡೂರು ನಗರ ಅಧ್ಯಕ್ಷ ಹರೀಶ್ ಕುಮಾರ್ ಮಾತನಾಡಿ, ಕನ್ನಡ ಸಾಹಿತ್ಯಕ್ಕೆ ವಚನ ಸಾಹಿತ್ಯದಂತಹ ವಿಶಿಷ್ಟ ಕೊಡುಗೆ ನೀಡಿರುವ ದೇವರ ದಾಸಿಮಯ್ಯ ಅವರ 1046ನೇ ಜಯಂತಿಯನ್ನು  ಕಡೂರಿನಲ್ಲಿ ಶೈಕ್ಷಣಿಕ,‌ರಾಜಕೀಯ, ಸಾಮಾಜಿಕವಾಗಿ ಸಂಘಟನೆ ಮೂಲಕ ಜಿಲ್ಲಾ ಮಟ್ಟದಲ್ಲಿ ದೇವಾಂಗ ಜನ ಜಾಗೃತಿ ಮತ್ತು ಸಂಘಟನಾ ಸಮಾವೇಶವನ್ನು ಈ ಬಾರಿ ಅದ್ದೂರಿಯಾಗಿ ಹಮ್ಮಿಕೊಳ್ಳಲಾಗಿದೆ.‌ ಸಮಾವೇಶವನ್ನು ಕ್ಷೇತ್ರದ ಶಾಸಕ ಕೆ.ಎಸ್. ಆನಂದ್ ಉದ್ಘಾಟಿಸಲಿದ್ದಾರೆ.ರಾಜ್ಯಸಭಾ ಸದಸ್ಯ ಕೆ.ನಾರಾಯಣ್ ರಾಜ್ಯ ದೇವಾಂಗ ಸಂಘದ ಅಧ್ಯಕ್ಷ ರವೀಂದ್ರ ಕಲಬುರ್ಗಿ, ಮಾಜಿ ಸಚಿವರಾದ ಉಮಾಶ್ರೀ, ಎಂ ಡಿ ಲಕ್ಷ್ಮಿ ನಾರಾಯಣ್. ಶಾಸಕರುಗಳಾದ ಎಚ್ ಡಿ ತಮ್ಮಯ್ಯ. ಸಿ.ಟಿ ರವಿ, ಜಿ ಎಚ್ ಶ್ರೀನಿವಾಸ್, ಎಸ್. ಎಲ್ ಭೋಜೇಗೌಡ, ಮಾಜಿ ಶಾಸಕರಾದ ವೈಎಸ್‌ವಿ ದತ್ತ, ಬೆಳ್ಳಿಪ್ರಕಾಶ್ ಮುಂತಾದವರು ಭಾಗವಹಿಸಲಿದ್ದು,‌  ಸಾಹಿತಿ ನಾಗಶ್ರೀ ತ್ಯಾಗರಾಜ್ ಉಪನ್ಯಾಸ ನೀಡಲಿದ್ದಾರೆ ಎಂದು ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಜಿಲ್ಲಾ ದೇವಾಂಗ ಸಂಘದ ಅಧ್ಯಕ್ಷ ಕೆ. ಶ್ರೀನಿವಾಸ್, ರಾಜ್ಯ ಸಹ ಕಾರ್ಯದರ್ಶಿ ಸಿ.ಎಸ್‌.‌ರವಿಕುಮಾರ್, ಕಾರ್ಯದರ್ಶಿ ಧನಪಾಲ್. ಎಚ್ ಎಲ್. ಶೇಖರಪ್ಪ. ಸಿಂಗಟಗೆರೆ ಸಿದ್ದಪ್ಪ. ಅರೆಕಲ್ ಪ್ರಕಾಶ್. ಎಚ್. ವೆಂಕಟೇಶ್ ಮೂರ್ತಿ. ಚಿಕ್ಕಪಟ್ಟಣಗೆರೆ ನಾಗರಾಜು, ಕುಮಾರಸ್ವಾಮಿ ಮತ್ತಿತರಿದ್ದರು.
    3
    ಕಡೂರು : ಏ.2ರಂದು ಕಡೂರಿನಲ್ಲಿ  ಜಿಲ್ಲಾ ಮಟ್ಟದ ಶ್ರೀ ದೇವರ ದಾಸಿಮಯ್ಯನವರ ಜಯಂತ್ಯೋತ್ಸವ ಸಮಾರಂಭವನ್ನು ಆದ್ದೂರಿಯಾಗಿ ಆಚರಿಸಲಾಗುವುದು ಎಂದು ದೇವರ ದಾಸಿಮಯ್ಯ ಆಚರಣೆ ಜಿಲ್ಲಾ ಸಮಿತಿಯ ಅಧ್ಯಕ್ಷ ಜೆ ಯೋಗೀಶ್ವರ ತಿಳಿಸಿದರು.
ಪಟ್ಟಣದ ಬನಶಂಕರಿ ಕಲ್ಯಾಣ ಮಂಟಪದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಅಂದು ಪಟ್ಟಣದ ಗಣಪತಿ ಪೆಂಡಾಲ್ ಆವರಣದಲ್ಲಿ ಸಭಾ ಕಾರ್ಯಕ್ರಮವು ಮಧ್ಯಾಹ್ನ 12ಗಂಟೆಗೆ ಪ್ರಾರಂಭವಾಗಲಿದೆ. ಸಮಾರಂಭಕ್ಕೂ ಮುನ್ನಾ 
ಬೆಳಿಗ್ಗೆ 10ಗಂಟೆಗೆ ಪಟ್ಟಣದ ವೆಂಕಟೇಶ್ವರ ದೇವಸ್ಥಾನದ ಆವರಣದಿಂದ ಪೆಂಡಾಲ್ ವರೆಗೂ ದೇವರದಾಸಿಮಯ್ಯ ಅವರ ಭಾವಚಿತ್ರದೊಂದಿಗೆ ವಿವಿಧ ಕಲಾತಂಡಗಳೊಂದಿಗೆ. ಮೆರವಣಿಗೆ ನಡೆಸಲಾಗುತ್ತದೆ. ಹಂಪೆ ಹೇಮಕೂಟದ  ಶ್ರೀ ದಯಾನಂದ ಪುರಿ ಸ್ವಾಮೀಜಿ, ಹಾಗೂ  ಮಹಾರಾಷ್ಟ್ರ ಸೊಲ್ಲಾಪುರದ ಶ್ರೀ ಡಾ. ಅಭಿನವ ರಾಮಲಿಂಗ ಪಟ್ಟದೇವರು ಹಾಗೂ ಜಿಲ್ಲೆಯ ಸಮಾಜ ಬಾಂಧವರು ಮೆರವಣಿಗೆಯಲ್ಲಿ ಭಾಗವಹಿಸಲಿದ್ದಾರೆ ಎಂದರು.
ದೇವಾಂಗ ಸಂಘದ  ತಾಲೂಕು ಅಧ್ಯಕ್ಷ ಎಚ್.ಎಲ್. ರಂಗನಾಥ್ ಮಾತನಾಡಿ, ಜಿಲ್ಲೆಯಾದ್ಯಂತ 
ಸಮಾಜದ ಬಂಧುಗಳು ಇರುವ ಗ್ರಾಮಗಳಿಗೆ ತೆರಳಿ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಲಾಗಿದೆ.  ಜಿಲ್ಲಾದ್ಯಂತ 5,000ಕ್ಕೂ ಹೆಚ್ಚು ಸಮಾಜ ಬಾಂಧವರು ಆಗಮಿಸುವ ನಿರೀಕ್ಷೆ ಇದೆ. ಈ ಮೂಲಕ ಸಮಾಜದ ಸಂಘಟನೆಗೆ ಹೆಚ್ಚಿನ ಒತ್ತು ನೀಡಿ ಕೆಲಸ ಮಾಡಲಾಗುವುದು. ಸಮಾವೇಶದಲ್ಲಿ ಪಟ್ಟಣದ ಪ್ರಖ್ಯಾತಿ ವೈದ್ಯರಾದ ಡಾ. ಛಾಯಾಪತಿ ಅವರಿಗೆ ದೇವಲ ಮಹರ್ಷಿ ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತದೆ ಎಂದರು.
ದೇವಾಂಗ ಸಮಾಜದ ಕಡೂರು ನಗರ ಅಧ್ಯಕ್ಷ ಹರೀಶ್ ಕುಮಾರ್ ಮಾತನಾಡಿ, ಕನ್ನಡ ಸಾಹಿತ್ಯಕ್ಕೆ ವಚನ ಸಾಹಿತ್ಯದಂತಹ ವಿಶಿಷ್ಟ ಕೊಡುಗೆ ನೀಡಿರುವ ದೇವರ ದಾಸಿಮಯ್ಯ ಅವರ 1046ನೇ ಜಯಂತಿಯನ್ನು  ಕಡೂರಿನಲ್ಲಿ ಶೈಕ್ಷಣಿಕ,‌ರಾಜಕೀಯ, ಸಾಮಾಜಿಕವಾಗಿ ಸಂಘಟನೆ ಮೂಲಕ ಜಿಲ್ಲಾ ಮಟ್ಟದಲ್ಲಿ ದೇವಾಂಗ ಜನ ಜಾಗೃತಿ ಮತ್ತು ಸಂಘಟನಾ ಸಮಾವೇಶವನ್ನು
ಈ ಬಾರಿ ಅದ್ದೂರಿಯಾಗಿ ಹಮ್ಮಿಕೊಳ್ಳಲಾಗಿದೆ.‌ ಸಮಾವೇಶವನ್ನು ಕ್ಷೇತ್ರದ ಶಾಸಕ ಕೆ.ಎಸ್. ಆನಂದ್ ಉದ್ಘಾಟಿಸಲಿದ್ದಾರೆ.ರಾಜ್ಯಸಭಾ ಸದಸ್ಯ ಕೆ.ನಾರಾಯಣ್ ರಾಜ್ಯ ದೇವಾಂಗ ಸಂಘದ ಅಧ್ಯಕ್ಷ ರವೀಂದ್ರ ಕಲಬುರ್ಗಿ, ಮಾಜಿ ಸಚಿವರಾದ ಉಮಾಶ್ರೀ, ಎಂ ಡಿ ಲಕ್ಷ್ಮಿ ನಾರಾಯಣ್. ಶಾಸಕರುಗಳಾದ ಎಚ್ ಡಿ ತಮ್ಮಯ್ಯ. ಸಿ.ಟಿ ರವಿ,
ಜಿ ಎಚ್ ಶ್ರೀನಿವಾಸ್, ಎಸ್. ಎಲ್ ಭೋಜೇಗೌಡ, ಮಾಜಿ ಶಾಸಕರಾದ ವೈಎಸ್‌ವಿ ದತ್ತ, ಬೆಳ್ಳಿಪ್ರಕಾಶ್ ಮುಂತಾದವರು ಭಾಗವಹಿಸಲಿದ್ದು,‌  ಸಾಹಿತಿ ನಾಗಶ್ರೀ ತ್ಯಾಗರಾಜ್ ಉಪನ್ಯಾಸ ನೀಡಲಿದ್ದಾರೆ ಎಂದು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ದೇವಾಂಗ ಸಂಘದ ಅಧ್ಯಕ್ಷ ಕೆ. ಶ್ರೀನಿವಾಸ್, ರಾಜ್ಯ ಸಹ ಕಾರ್ಯದರ್ಶಿ ಸಿ.ಎಸ್‌.‌ರವಿಕುಮಾರ್, ಕಾರ್ಯದರ್ಶಿ ಧನಪಾಲ್. ಎಚ್ ಎಲ್. ಶೇಖರಪ್ಪ. ಸಿಂಗಟಗೆರೆ ಸಿದ್ದಪ್ಪ. ಅರೆಕಲ್ ಪ್ರಕಾಶ್. ಎಚ್. ವೆಂಕಟೇಶ್ ಮೂರ್ತಿ. ಚಿಕ್ಕಪಟ್ಟಣಗೆರೆ ನಾಗರಾಜು, ಕುಮಾರಸ್ವಾಮಿ ಮತ್ತಿತರಿದ್ದರು.
    user_Kadur News
    Kadur News
    ಪತ್ರಕರ್ತ Kadur, Chikkamagaluru•
    23 hrs ago
  • ಶಿವಮೊಗ್ಗ: ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಕೊಂಡಿ ರುವ ಜಿಲ್ಲೆಯ ಶಂಕರ ಘಟ್ಟದ ನಮ್ಮ ದೀನಬಂಧು ಸೇವಾ ಟ್ರಸ್ಟ್ ಸಾರ್ಥಕವಾದ 25 ವರ್ಷಗಳನ್ನು ಪೂರೈಸಿರುವ ಹಿನ್ನಲೆಯಲ್ಲಿ ತನ್ನ ಬೆಳ್ಳಿ ಹಬ್ಬವನ್ನು ಆಚರಿಸಿ ಕೊಳ್ಳುತ್ತಿದೆ. ಸಮಾಜದ ಋಣವನ್ನು ತೀರಿಸಲು ವಿಶೇಷವಾಗಿ ದೀನ ದಲಿತರ ಮತ್ತು ಸಮಾಜದ ಶೋಷಿತ ವರ್ಗದವರ ಸೇವೆಗಾಗಿ ಕಟಿಬದ್ಧರಾಗಿ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಶಂಕರಘಟ್ಟದಿಂದ ಪಾದಯಾತ್ರೆ ಮೂಲಕ ತೆರಳಿ, ಧರ್ಮಾಧಿಕಾರಿಗಳಾದ ಡಾ: ವೀರೇಂದ್ರ ಹೆಗ್ಗಡೆಯವರ ಆಶೀರ್ವಾದದೊಂದಿಗೆ, ದಿನಾಂಕ 2.10.1999 ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಜನ್ಮದಿನ ದಂದು ದೀನಬಂಧು ಸೇವಾ ಟ್ರಸ್ಟ್‍ನ್ನು ಸ್ಥಾಪಿಸಲಾಯಿತು. ದೀನಬಂಧು, ದೀನರ, ವೃದ್ಧರ ಹಾಗೂ ಬಡ ವಿದ್ಯಾರ್ಥಿಗಳ ಶೈಕ್ಷಣಿಕ ಬೆಳವಣಿಗೆಗೆ ಪೂರಕ ವಾದ ಹಾಗೂ ಅವರ ಸಂಕಷ್ಟ ಗಳಿಗೆ ನೆರವಾಗುತ್ತಾ, ಪ್ರೋತ್ಸಾಹಿ ಸುತ್ತಾ, ಅನೇಕ ಸಮಾಜ ಸೇವಾ ಕಾರ್ಯಗಳನ್ನು ನಡೆಸಿಕೊಂಡು ಬರುತ್ತಿದೆ. ರಚನಾತ್ಮಕ ಕಾರ್ಯ ಗಳನ್ನು ನಡೆಸುವ ಉದ್ದೇಶದ ಹಿನ್ನೆಲೆಯಲ್ಲಿ ಈ ದೀನಬಂಧು ಸೇವಾ ಟ್ರಸ್ಟ್(ರಿ)ನ್ನು ಸ್ಥಾಪಿಸ ಲಾಗಿತ್ತು. ಈಗ ಟ್ರಸ್ಟ್ ಗೆ 25 ವರ್ಷಗಳು ತುಂಬಿದೆ. ಬೆಳ್ಳಿಹಬ್ಬದ ಅಂಗವಾಗಿ ಇಂದು ಸಂಜೆ 4.00 ಘಂಟೆಗೆ ಶಿವಮೊಗ್ಗದ ಕುವೆಂಪು ರಂಗಮಂದಿರದಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳ ಲಾಗಿದ್ದು, ಉಡುಪಿಯ ಡಾ.ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ ಪ್ರವರ್ತಕರಾದ ನಾಡೋಜ ಡಾ.ಜಿ. ಶಂಕರ್ ಇವರಿಗೆ ದೀನಬಂಧು ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ. ಈ ಪ್ರಶಸ್ತಿಯು ರೂ.1 ಲಕ್ಷ ಮತ್ತು ಪ್ರಶಸ್ತಿ ಪತ್ರಗಳನ್ನು ಒಳಗೊಂಡಿ ರುತ್ತದೆ. ರಾಜ್ಯದಲ್ಲಿ ಸಮಾಜಸೇವೆ ಯಲ್ಲಿ ತೊಡಗಿರುವ ಸಮಾಜ ಸೇವಕರೊಬ್ಬರನ್ನು ಆಯ್ಕೆ ಮಾಡುವ ಸಲುವಾಗಿ ತುಮಕೂರು ವಿಶ್ವವಿದ್ಯಾನಿಲಯದ ಕುಲಪತಿ ಗಳಾದ ಪ್ರೊ.ಎಂ.ವೆಂಕಟೇಶ್ವರಲು ಇವರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿ, ಆ ಸಮಿತಿಯ ಸದಸ್ಯ ರನ್ನಾಗಿ ಬೆಂಗಳೂರು ವಿಶ್ವವಿದ್ಯಾ ನಿಲಯದ ಕುಲಪತಿಗಳಾದ ಪ್ರೊ.ಬಿ.ರಮೇಶ್, ಕುವೆಂಪು ವಿಶ್ವವಿದ್ಯಾ ಲಯದ ಹಿರಿಯ ಪ್ರಾಧ್ಯಾಪಕರಾದ ಪ್ರೊ. ಜಿ.ಪ್ರಶಾಂತ ನಾಯಕ್ ಹಾಗೂ ಹಂಪಿ ವಿಶ್ವವಿದ್ಯಾಲಯದ ಪ್ರಾಧ್ಯಪಕರಾದ ಪ್ರೊ.ಪ್ರಭಾಕರ್ ಇವರನ್ನು ನೇಮಿಸಲಾಗಿತ್ತು. ಆ ಸಮಿತಿಯ ಶಿಫಾರಸ್ಸಿನ ಮೇರೆಗೆ ಡಾ.ಜಿ. ಶಂಕರ್ ಇವರಿಗೆ ಈ ಪ್ರಶಸ್ತಿಯನ್ನು ನೀಡಿ ಗೌರವಿಸ ಲಾಗುತ್ತಿದೆ. ಇದೇ ಸಂದರ್ಭದಲ್ಲಿ ಮಾಜಿ ಸಭಾಪತಿ ಗಳಾದ ಡಿ.ಎಚ್.ಶಂಕರ ಮೂರ್ತಿ ಯವರನ್ನು, ಕರ್ನಾಟಕ ಲೋಕಸೇವಾ ಆಯೋಗದ ಸದಸ್ಯ ರಾದ ಡಾ.ಬೋಜ್ಯಾ ನಾಯಕ್ ಹಾಗೂ ಶಿಕ್ಷಣತಜ್ಞರಾದ ಪ್ರೊ. ಜೆ.ಎಲ್. ಪದ್ಮನಾಭ್ ಇವರನ್ನು ಕೂಡ ಸನ್ಮಾನಿಸಲಾಗುವುದು. ಈ ಕಾರ್ಯಕ್ರಮದ ದಿವ್ಯಸಾನ್ನಿಧ್ಯ ವನ್ನು ಆದಿಚುಂಚನಗಿರಿ ಮಹಾ ಸಂಸ್ಥಾನದ ಪೀಠಾಧ್ಯಕ್ಷರಾದ ಶ್ರೀ ಡಾ.ನಿರ್ಮಲ ನಂದನಾಥ ಮಹಾಸ್ವಾಮೀಜಿಯವರು, ಸಾಣೇಹಳ್ಳಿಯ ಶ್ರೀ ಡಾ.ಪಂಡಿತಾ ರಾಧ್ಯ ಶಿವಾಚಾರ್ಯ ಸ್ವಾಮಿಗಳು, ಆದಿಚುಂಚನ ಗಿರಿ ಕ್ಷೇತ್ರದ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಪ್ರಸನ್ನನಾಥ ಸ್ವಾಮೀಜಿ, ಬಾರ್ಕೂರು ಮಹಾಸಂಸ್ಥಾನದ ಡಾ.ವಿಶ್ವಸಂತೋಷ ಭಾರತಿ ಶ್ರೀ ಪಾದಂಗಳು ಹಾಗೂ ಕೊಪ್ಪದ ಗೌರಿಗದ್ದೆಯ ಸ್ವರ್ಣಪೀಠಿಕಾಪುರ ದತ್ತಾಶ್ರಮದ ಅವಧೂತರಾದ ಶ್ರೀ ವಿನಯ್ ಗುರೂಜಿಯವರು ವಹಿಸಲ್ಲಿದ್ದಾರೆ. ಕಾರ್ಯಕ್ರಮದ ಉದ್ಘಾಟನೆಯನ್ನು ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖಾ ಸಚಿವರಾದ ಮಧುಬಂಗಾರಪ್ಪ ನೆರವೇರಿಸಲ್ಲಿದ್ದಾರೆ. ಕಾರ್ಯಕ್ರಮದಲ್ಲಿ ಲೋಕಸಭಾ ಸದಸ್ಯರಾದ ಬಿ.ವೈ.ರಾಘವೇಂದ್ರ, ಶಾಸಕರುಗಳಾದ ಬಿ.ಕೆ. ಸಂಗಮೇಶ್ವರ್, ಗೋಪಾಲಕೃಷ್ಣ ಬೇಳೂರು, ಎಸ್.ಎನ್. ಚನ್ನಬಸಪ್ಪ, ವಿಧಾನಪರಿಷತ್ ಶಾಸಕರುಗಳಾದಡಾ.ಮಂಜುನಾಥ ಭಂಡಾರಿ, ಬಲ್ಕೀಶ್‍ಬಾನು, ಡಾ.ಧನಂಜಯ ಸರ್ಜಿ, ಡಿ.ಎಸ್. ಅರುಣ್, ಆಯನೂರು ಮಂಜುನಾಥ್, ಸುಧಾಕರ ಎಸ್ ಶೆಟ್ಟಿ, ಸಿ.ಎಸ್. ಚಂದ್ರಭೂಪಾಲ್, ಎಸ್. ರುದ್ರೇಗೌಡರು, ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ಸಿ.ಎಸ್.ಷಡಾಕ್ಷರಿಯವರು, ಎಂ.ಶ್ರೀಕಾಂತ್, ಆರ್. ಪ್ರಸನ್ನ ಕುಮಾರ್, ಹೆಚ್.ಎನ್. ವಿದ್ಯಾದರ್, ಕೆ.ಮರಿಯಪ್ಪ, ಎಸ್. ಓಂಕಾರಪ್ಪ, ಎನ್. ರಮೇಶ್ ಹಾಗೂ ಎಸ್ ಪಿ ದಿನೇಶ್ ಭಾಗವಹಿಸಲ್ಲಿದ್ದಾರೆ. ಸರಿಗಮಪ ಗಾಯಕರಿಂದ ಗಾನಸಂಜೆ ಹಾಗೂ ಯಕ್ಷಗಾನ ನಾಟ್ಯ ವೈಭವ: ಕಾರ್ಯಕ್ರಮವು ನಿಗದಿತ ಸಮಯದಲ್ಲಿ ಸಂಜೆ 4.00 ಘಂಟೆಗೆ ಆರಂಭವಾಗಲ್ಲಿದ್ದು, ಸರಿಗಮಪ ಖ್ಯಾತಿಯ ಕಾರ್ತಿಕ್ ನಾಗಲಪುರ, ಸವಿಶ್ರೀ ಕುಂದಾಪುರ, ಆಮೀಶ್ ಕುಮಾರ್ ಇನ್ನಿತರ ಗಾಯಕ-ಗಾಯಕಿಯರಿಂದ ಗಾನಸಂಜೆ, 5.00 ಘಂಟೆಗೆ ರಾಘವೇಂದ್ರ ಆಚಾರ್ಯ ಜನ್ಸಾಲೆ ಅವರಿಂದ ಯಕ್ಷಗಾನ ನೃತ್ಯ ವೈಭವ ಹಾಗೂ ಇನ್ನಿತರ ಸಾಂಸ್ಕøತಿಕ ಕಾರ್ಯಕ್ರಮಗಳು ಇರುತ್ತವೆ. ಈ ಕಾರ್ಯಕ್ರಮದಲ್ಲಿ ಟ್ರಸ್ಟ್ ಸದಸ್ಯರು ಗಳಾದ ಡಾ. ಶೇಖರ್, ಡಾ. ಹಸೀನಾ, ಜಿ.ಡಿ. ಮಂಜು ನಾಥ್, ಯು ಶಿವಾನಂದ, ಜಿತೇಂದ್ರ, ಎಂ ಎಂ ಸ್ವಾಮಿ, ಪ್ರಸನ್ನ, ಎಂ ಸಿದ್ದರಾಮು, ಮಂಜುನಾಥ್ ಇರಲಿದ್ದಾರೆ.
    1
    ಶಿವಮೊಗ್ಗ: ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಕೊಂಡಿ ರುವ ಜಿಲ್ಲೆಯ ಶಂಕರ ಘಟ್ಟದ ನಮ್ಮ ದೀನಬಂಧು ಸೇವಾ ಟ್ರಸ್ಟ್ ಸಾರ್ಥಕವಾದ 25 ವರ್ಷಗಳನ್ನು ಪೂರೈಸಿರುವ ಹಿನ್ನಲೆಯಲ್ಲಿ ತನ್ನ ಬೆಳ್ಳಿ ಹಬ್ಬವನ್ನು ಆಚರಿಸಿ ಕೊಳ್ಳುತ್ತಿದೆ.
ಸಮಾಜದ ಋಣವನ್ನು ತೀರಿಸಲು ವಿಶೇಷವಾಗಿ ದೀನ ದಲಿತರ ಮತ್ತು ಸಮಾಜದ ಶೋಷಿತ ವರ್ಗದವರ ಸೇವೆಗಾಗಿ ಕಟಿಬದ್ಧರಾಗಿ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಶಂಕರಘಟ್ಟದಿಂದ ಪಾದಯಾತ್ರೆ ಮೂಲಕ ತೆರಳಿ, ಧರ್ಮಾಧಿಕಾರಿಗಳಾದ ಡಾ: ವೀರೇಂದ್ರ ಹೆಗ್ಗಡೆಯವರ ಆಶೀರ್ವಾದದೊಂದಿಗೆ, ದಿನಾಂಕ 2.10.1999 ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಜನ್ಮದಿನ ದಂದು ದೀನಬಂಧು ಸೇವಾ ಟ್ರಸ್ಟ್‍ನ್ನು  ಸ್ಥಾಪಿಸಲಾಯಿತು.
ದೀನಬಂಧು, ದೀನರ, ವೃದ್ಧರ ಹಾಗೂ ಬಡ ವಿದ್ಯಾರ್ಥಿಗಳ ಶೈಕ್ಷಣಿಕ ಬೆಳವಣಿಗೆಗೆ ಪೂರಕ ವಾದ ಹಾಗೂ ಅವರ ಸಂಕಷ್ಟ ಗಳಿಗೆ ನೆರವಾಗುತ್ತಾ, ಪ್ರೋತ್ಸಾಹಿ ಸುತ್ತಾ, ಅನೇಕ ಸಮಾಜ ಸೇವಾ ಕಾರ್ಯಗಳನ್ನು ನಡೆಸಿಕೊಂಡು ಬರುತ್ತಿದೆ. ರಚನಾತ್ಮಕ ಕಾರ್ಯ ಗಳನ್ನು ನಡೆಸುವ ಉದ್ದೇಶದ ಹಿನ್ನೆಲೆಯಲ್ಲಿ ಈ ದೀನಬಂಧು ಸೇವಾ ಟ್ರಸ್ಟ್(ರಿ)ನ್ನು ಸ್ಥಾಪಿಸ ಲಾಗಿತ್ತು. ಈಗ ಟ್ರಸ್ಟ್ ಗೆ 25 ವರ್ಷಗಳು ತುಂಬಿದೆ.
ಬೆಳ್ಳಿಹಬ್ಬದ ಅಂಗವಾಗಿ ಇಂದು ಸಂಜೆ 4.00 ಘಂಟೆಗೆ ಶಿವಮೊಗ್ಗದ ಕುವೆಂಪು ರಂಗಮಂದಿರದಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳ ಲಾಗಿದ್ದು, ಉಡುಪಿಯ ಡಾ.ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ ಪ್ರವರ್ತಕರಾದ ನಾಡೋಜ ಡಾ.ಜಿ. ಶಂಕರ್ ಇವರಿಗೆ ದೀನಬಂಧು ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ. ಈ ಪ್ರಶಸ್ತಿಯು ರೂ.1 ಲಕ್ಷ ಮತ್ತು ಪ್ರಶಸ್ತಿ ಪತ್ರಗಳನ್ನು ಒಳಗೊಂಡಿ ರುತ್ತದೆ. ರಾಜ್ಯದಲ್ಲಿ ಸಮಾಜಸೇವೆ ಯಲ್ಲಿ ತೊಡಗಿರುವ ಸಮಾಜ ಸೇವಕರೊಬ್ಬರನ್ನು ಆಯ್ಕೆ ಮಾಡುವ ಸಲುವಾಗಿ ತುಮಕೂರು ವಿಶ್ವವಿದ್ಯಾನಿಲಯದ ಕುಲಪತಿ ಗಳಾದ ಪ್ರೊ.ಎಂ.ವೆಂಕಟೇಶ್ವರಲು ಇವರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿ, ಆ ಸಮಿತಿಯ ಸದಸ್ಯ ರನ್ನಾಗಿ ಬೆಂಗಳೂರು ವಿಶ್ವವಿದ್ಯಾ ನಿಲಯದ ಕುಲಪತಿಗಳಾದ ಪ್ರೊ.ಬಿ.ರಮೇಶ್, ಕುವೆಂಪು ವಿಶ್ವವಿದ್ಯಾ ಲಯದ ಹಿರಿಯ ಪ್ರಾಧ್ಯಾಪಕರಾದ ಪ್ರೊ. ಜಿ.ಪ್ರಶಾಂತ ನಾಯಕ್ ಹಾಗೂ ಹಂಪಿ ವಿಶ್ವವಿದ್ಯಾಲಯದ ಪ್ರಾಧ್ಯಪಕರಾದ ಪ್ರೊ.ಪ್ರಭಾಕರ್ ಇವರನ್ನು ನೇಮಿಸಲಾಗಿತ್ತು. ಆ ಸಮಿತಿಯ ಶಿಫಾರಸ್ಸಿನ ಮೇರೆಗೆ ಡಾ.ಜಿ. ಶಂಕರ್ ಇವರಿಗೆ ಈ ಪ್ರಶಸ್ತಿಯನ್ನು ನೀಡಿ ಗೌರವಿಸ ಲಾಗುತ್ತಿದೆ.
ಇದೇ ಸಂದರ್ಭದಲ್ಲಿ ಮಾಜಿ ಸಭಾಪತಿ ಗಳಾದ ಡಿ.ಎಚ್.ಶಂಕರ ಮೂರ್ತಿ ಯವರನ್ನು, ಕರ್ನಾಟಕ ಲೋಕಸೇವಾ ಆಯೋಗದ ಸದಸ್ಯ ರಾದ ಡಾ.ಬೋಜ್ಯಾ ನಾಯಕ್ ಹಾಗೂ ಶಿಕ್ಷಣತಜ್ಞರಾದ ಪ್ರೊ. ಜೆ.ಎಲ್. ಪದ್ಮನಾಭ್ ಇವರನ್ನು ಕೂಡ ಸನ್ಮಾನಿಸಲಾಗುವುದು.
ಈ ಕಾರ್ಯಕ್ರಮದ ದಿವ್ಯಸಾನ್ನಿಧ್ಯ ವನ್ನು ಆದಿಚುಂಚನಗಿರಿ ಮಹಾ ಸಂಸ್ಥಾನದ ಪೀಠಾಧ್ಯಕ್ಷರಾದ ಶ್ರೀ ಡಾ.ನಿರ್ಮಲ ನಂದನಾಥ ಮಹಾಸ್ವಾಮೀಜಿಯವರು, ಸಾಣೇಹಳ್ಳಿಯ ಶ್ರೀ ಡಾ.ಪಂಡಿತಾ ರಾಧ್ಯ ಶಿವಾಚಾರ್ಯ ಸ್ವಾಮಿಗಳು, ಆದಿಚುಂಚನ ಗಿರಿ ಕ್ಷೇತ್ರದ ಪ್ರಧಾನ ಕಾರ್ಯದರ್ಶಿಗಳಾದ
ಶ್ರೀ ಪ್ರಸನ್ನನಾಥ ಸ್ವಾಮೀಜಿ, ಬಾರ್ಕೂರು ಮಹಾಸಂಸ್ಥಾನದ ಡಾ.ವಿಶ್ವಸಂತೋಷ ಭಾರತಿ ಶ್ರೀ ಪಾದಂಗಳು ಹಾಗೂ ಕೊಪ್ಪದ ಗೌರಿಗದ್ದೆಯ ಸ್ವರ್ಣಪೀಠಿಕಾಪುರ ದತ್ತಾಶ್ರಮದ ಅವಧೂತರಾದ ಶ್ರೀ ವಿನಯ್ ಗುರೂಜಿಯವರು ವಹಿಸಲ್ಲಿದ್ದಾರೆ. ಕಾರ್ಯಕ್ರಮದ ಉದ್ಘಾಟನೆಯನ್ನು ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖಾ ಸಚಿವರಾದ ಮಧುಬಂಗಾರಪ್ಪ ನೆರವೇರಿಸಲ್ಲಿದ್ದಾರೆ. ಕಾರ್ಯಕ್ರಮದಲ್ಲಿ ಲೋಕಸಭಾ ಸದಸ್ಯರಾದ ಬಿ.ವೈ.ರಾಘವೇಂದ್ರ, ಶಾಸಕರುಗಳಾದ ಬಿ.ಕೆ. ಸಂಗಮೇಶ್ವರ್, ಗೋಪಾಲಕೃಷ್ಣ ಬೇಳೂರು, ಎಸ್.ಎನ್. ಚನ್ನಬಸಪ್ಪ, ವಿಧಾನಪರಿಷತ್ ಶಾಸಕರುಗಳಾದಡಾ.ಮಂಜುನಾಥ ಭಂಡಾರಿ, ಬಲ್ಕೀಶ್‍ಬಾನು, ಡಾ.ಧನಂಜಯ ಸರ್ಜಿ,  ಡಿ.ಎಸ್. ಅರುಣ್, ಆಯನೂರು ಮಂಜುನಾಥ್, ಸುಧಾಕರ ಎಸ್ ಶೆಟ್ಟಿ, ಸಿ.ಎಸ್. ಚಂದ್ರಭೂಪಾಲ್, ಎಸ್. ರುದ್ರೇಗೌಡರು, ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ಸಿ.ಎಸ್.ಷಡಾಕ್ಷರಿಯವರು, ಎಂ.ಶ್ರೀಕಾಂತ್, ಆರ್. ಪ್ರಸನ್ನ ಕುಮಾರ್, ಹೆಚ್.ಎನ್. ವಿದ್ಯಾದರ್, ಕೆ.ಮರಿಯಪ್ಪ, ಎಸ್. ಓಂಕಾರಪ್ಪ, ಎನ್. ರಮೇಶ್ ಹಾಗೂ ಎಸ್ ಪಿ ದಿನೇಶ್ ಭಾಗವಹಿಸಲ್ಲಿದ್ದಾರೆ.
ಸರಿಗಮಪ ಗಾಯಕರಿಂದ ಗಾನಸಂಜೆ ಹಾಗೂ ಯಕ್ಷಗಾನ ನಾಟ್ಯ ವೈಭವ:
ಕಾರ್ಯಕ್ರಮವು ನಿಗದಿತ ಸಮಯದಲ್ಲಿ ಸಂಜೆ 4.00 ಘಂಟೆಗೆ ಆರಂಭವಾಗಲ್ಲಿದ್ದು,  ಸರಿಗಮಪ ಖ್ಯಾತಿಯ ಕಾರ್ತಿಕ್ ನಾಗಲಪುರ, ಸವಿಶ್ರೀ ಕುಂದಾಪುರ, ಆಮೀಶ್ ಕುಮಾರ್ ಇನ್ನಿತರ ಗಾಯಕ-ಗಾಯಕಿಯರಿಂದ ಗಾನಸಂಜೆ, 5.00 ಘಂಟೆಗೆ ರಾಘವೇಂದ್ರ ಆಚಾರ್ಯ ಜನ್ಸಾಲೆ ಅವರಿಂದ ಯಕ್ಷಗಾನ ನೃತ್ಯ ವೈಭವ ಹಾಗೂ ಇನ್ನಿತರ ಸಾಂಸ್ಕøತಿಕ ಕಾರ್ಯಕ್ರಮಗಳು ಇರುತ್ತವೆ.
ಈ ಕಾರ್ಯಕ್ರಮದಲ್ಲಿ ಟ್ರಸ್ಟ್ ಸದಸ್ಯರು ಗಳಾದ  ಡಾ. ಶೇಖರ್, ಡಾ. ಹಸೀನಾ, ಜಿ.ಡಿ. ಮಂಜು ನಾಥ್, ಯು ಶಿವಾನಂದ, ಜಿತೇಂದ್ರ, ಎಂ ಎಂ ಸ್ವಾಮಿ,  ಪ್ರಸನ್ನ, ಎಂ ಸಿದ್ದರಾಮು, ಮಂಜುನಾಥ್ ಇರಲಿದ್ದಾರೆ.
    user_ಆರ್.ವಿ.ಕೃಷ್ಣ
    ಆರ್.ವಿ.ಕೃಷ್ಣ
    Local News Reporter ಶಿವಮೊಗ್ಗ, ಶಿವಮೊಗ್ಗ, ಕರ್ನಾಟಕ•
    21 hrs ago
  • ಅರಕಲಗೂಡು : ತಾಲೂಕಿನ ಮಲ್ಲಿಪಟ್ಟಣ ಗ್ರಾಮದಲ್ಲಿ ಚಿಕ್ಕದಾಗಿ ಕ್ಲಿನಿಕ್ ಇಟ್ಟುಕೊಂಡು ಬಡವರಿಗೆ ಉಚಿತವಾಗಿ ಸೇವೆ ನೀಡುವ ಜತೆಗೆ ಆರ್ಥಿಕವಾಗಿ ಹಿಂದುಳಿದಿರುವ ವಿದ್ಯಾವಂತ ಯುವ ಸಮುದಾಯಕ್ಕೆ ಸಹಕಾರ ನೀಡುತ್ತಿರುವ ಖ್ಯಾತ ವೈದ್ಯ ಡಾ.ವಿಶ್ವನಾಥ್ ಅವರ ಜನಪರ ಸೇವೆ ಇತರೆ ವೈದ್ಯರಿಗೆ ಆದರ್ಶಪ್ರಾಯವಾಗಿದೆ ಎಂದು ಹಿರಿಯ ವಕೀಲ ರೇವಣ್ಣ ಅವರು ತಿಳಿಸಿದರು. ಮಲ್ಲಿಪಟ್ಟಣ ಸೇರಿದಂತೆ ಸುತ್ತಾಮುತ್ತಲ ಯುವಕರು ಮಲ್ಲಿಪಟ್ಟಣ ಸಮುದಾಯ ಭವನದಲ್ಲಿ ಹಮ್ಮಿಕೊಂಡಿದ್ದ ಡಾ.ವಿಶ್ವನಾಥ್ ಅವರ ಹುಟ್ಟುಹಬ್ಬ ಆಚರಣೆ ಅಭಿಮಾನಿಗಳಿಂದ ಗೌರವ ಸ್ವೀಕರಿಸಿ ಮಾತನಾಡಿದ ಡಾ.ವಿಶ್ವನಾಥ್ ಅವರು,ನಾನು ಹುಟ್ಟಿದ ಊರಿನಲ್ಲಿಯೇ ವೈದ್ಯನಾಗಿ ಕಳೆದ ಮೂರುದಶಕಗಳಿಂದ ಸೇವೆ ಸಲ್ಲಿಸುತ್ತಿದ್ದೇನೆ.ಗ್ರಾಮೀಣ ಭಾಗದಲ್ಲಿನ ಕ್ಲಿನಿಕ್‌ಗೆ ಬರುವ ಬಹುತೇಕ ಮಂದಿ ಬಡವರೇ ಆಗಿರುತ್ತಾರೆ.ಇವರಿಂದ ಹಣವನ್ನು ನಿರೀಕ್ಷೆ ಮಾಡದೇ ಸೇವಾಮನೋಭಾವನೆಯನ್ನು ನಿರ್ವಹಿಸುತ್ತಿದ್ದೇನೆ.ಕೆಲವರು ಚಿಕಿತ್ಸೆಗೆ ತಕ್ಕಂತೆ ಹಣವನ್ನು ನೀಡುತ್ತಾರೆ.ಈ ರೀತಿ ಬಂದಂತಹ ಹಣವನ್ನು ಸಮಾಜದ ಏಳಿಗೆಗೆ ವಿನಿಯೋಗಿಸುತ್ತೇನೆ.ಒಮ್ಮೆ ಗ್ರಾಪಂ ಅಧ್ಯಕ್ಷನಾಗಿಯೂ ಸೇವೆ ಸಲ್ಲಿಸುವ ಅವಕಾಶವನ್ನು ಜನರು ನೀಡಿದ್ದರು.ಇಂತಹ ಕಾರ್ಯವನ್ನು ಶ್ಲಾಘಿಸಿ ಅಭಿಮಾನಿಗಳು ಹುಟ್ಟುಹಬ್ಬವನ್ನು ಸಾರ್ವಜನಿಕವಾಗಿ ಆಚರಣೆ ಮಾಡುತ್ತಿರುವುದು ಅತ್ಯಂತ ಸಂತಸದ ಕ್ಷಣವಾಗಿದೆ.ನನ್ನ ಸೇವೆಯನ್ನು ಹೀಗೆಯೇ ಮುಂದುವರಿಸಿಕೊಂಡು ಹೋಗುವೆ ಎಂದು ಹರ್ಷ ವ್ಯಕ್ತಪಡಿಸಿದರು. ಅಭಿಮಾನಿ ಬಳಗದ ಪ್ರಮುಖರಾದ ಭಾಗದಾಳ ಸುಧಾ ಹಾಗೂ ಮಲ್ಲಿಪಟ್ಟಣದ ಮಂಜು ತುಂಬಾ ಒಡಾಟದಿಂದ ವೈದ್ಯರ ಹುಟ್ಟುಹಬ್ಬವನ್ನು ಆಯೋಜನೆ ಮಾಡಲಾಗಿತ್ತು. ಕಾರ್ಯಕ್ರಮದಲ್ಲಿ ಮಾಜಿ ಗ್ರಾಪಂ ಅಧ್ಯಕ್ಷ ನಾಗರಾಜು ಸೇರಿದಂತೆ ಅನೇಕ ಪ್ರಮುಖರು ,ಸುತ್ತಮುತ್ತಲ್ಲಿನ ಗ್ರಾಮಗಳ ಗ್ರಾಮಸ್ಥರು ಮತ್ತು ಯುವಕರು ಭಾಗವಹಿಸಿದ್ದರು. #news5kannada​ #Dr_Vishwanath​ #Mallipattana​ #happybirthday​ #birthdaycelebration​ arkalgudu Hassan Docter political
    1
    ಅರಕಲಗೂಡು : ತಾಲೂಕಿನ ಮಲ್ಲಿಪಟ್ಟಣ ಗ್ರಾಮದಲ್ಲಿ ಚಿಕ್ಕದಾಗಿ ಕ್ಲಿನಿಕ್ ಇಟ್ಟುಕೊಂಡು ಬಡವರಿಗೆ ಉಚಿತವಾಗಿ ಸೇವೆ ನೀಡುವ ಜತೆಗೆ ಆರ್ಥಿಕವಾಗಿ ಹಿಂದುಳಿದಿರುವ ವಿದ್ಯಾವಂತ ಯುವ ಸಮುದಾಯಕ್ಕೆ ಸಹಕಾರ ನೀಡುತ್ತಿರುವ ಖ್ಯಾತ ವೈದ್ಯ ಡಾ.ವಿಶ್ವನಾಥ್ ಅವರ ಜನಪರ ಸೇವೆ ಇತರೆ ವೈದ್ಯರಿಗೆ ಆದರ್ಶಪ್ರಾಯವಾಗಿದೆ ಎಂದು ಹಿರಿಯ ವಕೀಲ ರೇವಣ್ಣ ಅವರು ತಿಳಿಸಿದರು.
ಮಲ್ಲಿಪಟ್ಟಣ ಸೇರಿದಂತೆ ಸುತ್ತಾಮುತ್ತಲ ಯುವಕರು ಮಲ್ಲಿಪಟ್ಟಣ ಸಮುದಾಯ ಭವನದಲ್ಲಿ ಹಮ್ಮಿಕೊಂಡಿದ್ದ ಡಾ.ವಿಶ್ವನಾಥ್ ಅವರ ಹುಟ್ಟುಹಬ್ಬ ಆಚರಣೆ
ಅಭಿಮಾನಿಗಳಿಂದ ಗೌರವ ಸ್ವೀಕರಿಸಿ ಮಾತನಾಡಿದ ಡಾ.ವಿಶ್ವನಾಥ್ ಅವರು,ನಾನು ಹುಟ್ಟಿದ ಊರಿನಲ್ಲಿಯೇ ವೈದ್ಯನಾಗಿ ಕಳೆದ ಮೂರುದಶಕಗಳಿಂದ ಸೇವೆ ಸಲ್ಲಿಸುತ್ತಿದ್ದೇನೆ.ಗ್ರಾಮೀಣ ಭಾಗದಲ್ಲಿನ ಕ್ಲಿನಿಕ್‌ಗೆ ಬರುವ ಬಹುತೇಕ ಮಂದಿ ಬಡವರೇ ಆಗಿರುತ್ತಾರೆ.ಇವರಿಂದ ಹಣವನ್ನು ನಿರೀಕ್ಷೆ ಮಾಡದೇ ಸೇವಾಮನೋಭಾವನೆಯನ್ನು ನಿರ್ವಹಿಸುತ್ತಿದ್ದೇನೆ.ಕೆಲವರು ಚಿಕಿತ್ಸೆಗೆ ತಕ್ಕಂತೆ ಹಣವನ್ನು ನೀಡುತ್ತಾರೆ.ಈ ರೀತಿ ಬಂದಂತಹ ಹಣವನ್ನು ಸಮಾಜದ ಏಳಿಗೆಗೆ ವಿನಿಯೋಗಿಸುತ್ತೇನೆ.ಒಮ್ಮೆ ಗ್ರಾಪಂ ಅಧ್ಯಕ್ಷನಾಗಿಯೂ ಸೇವೆ ಸಲ್ಲಿಸುವ ಅವಕಾಶವನ್ನು ಜನರು ನೀಡಿದ್ದರು.ಇಂತಹ ಕಾರ್ಯವನ್ನು ಶ್ಲಾಘಿಸಿ ಅಭಿಮಾನಿಗಳು ಹುಟ್ಟುಹಬ್ಬವನ್ನು ಸಾರ್ವಜನಿಕವಾಗಿ ಆಚರಣೆ ಮಾಡುತ್ತಿರುವುದು ಅತ್ಯಂತ ಸಂತಸದ ಕ್ಷಣವಾಗಿದೆ.ನನ್ನ ಸೇವೆಯನ್ನು ಹೀಗೆಯೇ ಮುಂದುವರಿಸಿಕೊಂಡು ಹೋಗುವೆ ಎಂದು ಹರ್ಷ ವ್ಯಕ್ತಪಡಿಸಿದರು.
ಅಭಿಮಾನಿ ಬಳಗದ ಪ್ರಮುಖರಾದ ಭಾಗದಾಳ ಸುಧಾ ಹಾಗೂ ಮಲ್ಲಿಪಟ್ಟಣದ ಮಂಜು ತುಂಬಾ ಒಡಾಟದಿಂದ ವೈದ್ಯರ ಹುಟ್ಟುಹಬ್ಬವನ್ನು ಆಯೋಜನೆ ಮಾಡಲಾಗಿತ್ತು. ಕಾರ್ಯಕ್ರಮದಲ್ಲಿ ಮಾಜಿ ಗ್ರಾಪಂ ಅಧ್ಯಕ್ಷ ನಾಗರಾಜು ಸೇರಿದಂತೆ ಅನೇಕ ಪ್ರಮುಖರು ,ಸುತ್ತಮುತ್ತಲ್ಲಿನ ಗ್ರಾಮಗಳ ಗ್ರಾಮಸ್ಥರು ಮತ್ತು ಯುವಕರು ಭಾಗವಹಿಸಿದ್ದರು.
#news5kannada​ #Dr_Vishwanath​ #Mallipattana​ #happybirthday​ #birthdaycelebration​ arkalgudu Hassan Docter political
    user_News5Kannada
    News5Kannada
    Local News Reporter Arkalgud, Hassan•
    2 hrs ago
  • Post by Suresh Belagere
    1
    Post by Suresh Belagere
    user_Suresh Belagere
    Suresh Belagere
    Video Creator ಚಿತ್ರದುರ್ಗ, ಚಿತ್ರದುರ್ಗ, ಕರ್ನಾಟಕ•
    15 hrs ago
  • ಚಳ್ಳಕೆರೆ ನಗರಸಭೆ ವ್ಯಾಪ್ತಿಯ ವಾಣಿಜ್ಯ ಮಳಿಗೆಗಳನ್ನು ಮಂಗಳವಾರ ಬೆಳಗ್ಗೆ ನೆಲಸಮ ಮಾಡಲಾಗುತ್ತದೆ ಎಂಬ ಸುದ್ದಿಯ ಹಿನ್ನೆಲೆಯಲ್ಲಿ ವರ್ತಕರಲ್ಲಿ ಆತಂಕದ ವಾತಾವರಣದಲ್ಲಿ ರಾತ್ರಿಯಿಡೀ ಜಾಗರಣೆ ಮಾಡುತ್ತಾ ನಿದ್ದೆಗೆಟ್ಟು ಹಲವು ವರ್ತಕರು ತಮ್ಮ ಅಂಗಡಿ ಮುಗ್ಗಟ್ಟುಗಳನ್ನ ತುರ್ತುಗತಿಯಲ್ಲಿ ಖಾಲಿ ಮಾಡಿದ್ದಾರೆ.
    1
    ಚಳ್ಳಕೆರೆ ನಗರಸಭೆ ವ್ಯಾಪ್ತಿಯ ವಾಣಿಜ್ಯ ಮಳಿಗೆಗಳನ್ನು ಮಂಗಳವಾರ ಬೆಳಗ್ಗೆ ನೆಲಸಮ ಮಾಡಲಾಗುತ್ತದೆ ಎಂಬ ಸುದ್ದಿಯ ಹಿನ್ನೆಲೆಯಲ್ಲಿ ವರ್ತಕರಲ್ಲಿ ಆತಂಕದ ವಾತಾವರಣದಲ್ಲಿ ರಾತ್ರಿಯಿಡೀ ಜಾಗರಣೆ ಮಾಡುತ್ತಾ ನಿದ್ದೆಗೆಟ್ಟು ಹಲವು ವರ್ತಕರು ತಮ್ಮ ಅಂಗಡಿ ಮುಗ್ಗಟ್ಟುಗಳನ್ನ ತುರ್ತುಗತಿಯಲ್ಲಿ ಖಾಲಿ ಮಾಡಿದ್ದಾರೆ.
    user_Vinay P palekar
    Vinay P palekar
    ಮಾಧ್ಯಮ ಚಿತ್ರದುರ್ಗ, ಚಿತ್ರದುರ್ಗ, ಕರ್ನಾಟಕ•
    18 hrs ago
  • Post by Md Aleemulla Shariff
    1
    Post by Md Aleemulla Shariff
    user_Md Aleemulla Shariff
    Md Aleemulla Shariff
    Citizen Reporter ಮೈಸೂರು, ಮೈಸೂರು, ಕರ್ನಾಟಕ•
    7 hrs ago
  • ತಣ್ಣೀರುಬಾವಿ ಕಡಲು ಮತ್ತು ನದಿ ದಂಡೆಗಳ ನಡುವೆ ಅನೇಕ ವರ್ಷಗಳಿಂದ ಸರಕಾರಿ ಭೂಮಿಯಲ್ಲಿ ವಾಸವಿರುವ ಬಡವರು ಹಕ್ಕು ಪತ್ರ ನೀಡಿ ಬಡವರಿಗೆ ಭೂಮಿಯ ಹಕ್ಕನ್ನು ಖಾತರಿಗೊಳಿಸುವ ಬದಲು ಬಡವರ ಕಾಲನಿಯನ್ನೇ ಬಲಾಡ್ಯರಿಗೆ ಪರಭಾರೆ ಮಾಡಿ ಕೆ.ಐ.ಎ.ಡಿ.ಬಿ ಅಧಿಕಾರಿಗಳು ಬೇಲಿ ಹಾಕಲು ಹೊರಟಿರುವುದು ಬಡವರನ್ನು ಒಕ್ಕಲೆಬ್ಬಿಸುವ ಹುನ್ನಾರವಾಗಿದ್ದು ಇದು ಸಂವಿಧಾನ ಬಾಹಿರ ಎಂದು ಡಿವೈಎಫ್ಐ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷರಾದ ಬಿ.ಕೆ ಇಮ್ತಿಯಾಜ್ ಹೇಳಿದರು ಅವರು ಇಂದು ಬೈಕಂಪಾಡಿಯಲ್ಲಿರುವ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯ ಎದುರು ತಣ್ಣೀರುಬಾವಿ ಜನ ವಸತಿ ಪ್ರದೇಶದಲ್ಲಿ ಕೆಐಎಡಿಬಿ ಅಧಿಕಾರಿಗಳು ಮನೆ ಮತ್ತು ಸಮುದ್ರಕ್ಕೆ ತಡೆಬೇಲಿ ಹಾಕಿರುವ ನೀತಿಯನ್ನು ಖಂಡಿಸಿ ಡಿವೈಎಫ್ಐ ಮಂಗಳೂರು ನಗರ ಸಮಿತಿ, ತಣ್ಣೀರುಬಾವಿ ಹೋರಾಟ ಸಮಿತಿ, ದಲಿತ ಹಕ್ಕುಗಳ ಸಮನ್ವಯ ಸಮಿತಿ ತಣ್ಣೀರುಬಾವಿ ನೇತೃತ್ವದಲ್ಲಿ ನಡೆದ ಪ್ರತಿಭಟನೆ ಉದ್ಘಾಟಿಸಿ ಮಾತನಾಡುತ್ತಿದ್ದರು. ಬೇಲಿಗಳನ್ನು ಕಟ್ಟಿ ಸಮುದ್ರವನ್ನೇ ನಂಬಿ ಬದುಕುವ ಬಡವರ ಕಡಲ ಸಂಭಂದವನ್ನು ತಡೆಯಲಾಗುತ್ತಿದೆ. ತಣ್ಣೀರುಬಾವಿ ಯಲ್ಲಿ ಹಾಕಿರುವ ಬೇಲಿಗಳನ್ನು ತೆರವುಗೊಳಿಸಲು ಜಿಲ್ಲಾಡಳಿತ ಮುಂದಾಗಬೇಕು ಎಂದು ಆಗ್ರಹಿಸಿದ ಅವರು ಬಡವರಿಗೆ ಕಿರುಕುಳ ಮುಂದುವರಿದರೆ ಹೋರಾಟ ತೀವ್ರಗೊಳಿಸುವ ಎಚ್ಚರಿಕೆ ನೀಡಿದರು. ಡಿವೈಎಫ್ಐ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ಮಾತನಾಡಿ ಸ್ಥಳೀಯ ಜನಪ್ರತಿನಿದಿನಗಳ ಇಚ್ಛಾಶಕ್ತಿಯ ಕೊರತೆಯಿಂದಾಗಿ ತಣ್ಣೀರುಬಾವಿಯ ನಾಗರಿಕರಿಗೆ ಇನ್ನೂ ಹಕ್ಕು ಪತ್ರ ಸಿಕ್ಕಿಲ್ಲ, ಇವರಿಗೆ ಚುನಾವಣೆ ಬಂದಾಗ ಮಾತ್ರ ಬಡವರು ನೆನಪಾಗ್ತಾರೆ ಎಂದು ಅವರು ಆಪಾದಿಸಿದರು. ಮಾಜಿ ಕಾಪೋರೇಟರ್ ದಯಾನಂದ ಶೆಟ್ಟಿ, ಹೋರಾಟ ಸಮಿತಿ ಕಾರ್ಯದರ್ಶಿ ಯೋಗೀಶ್ ಅಮೀನ್,ತಣ್ಣೀರುಬಾವಿ,ಡಿವೈಎಫ್ಐ ನಗರ ಕಾರ್ಯದರ್ಶಿ ತಯ್ಯುಬ್ ಬೆಂಗ್ರೆ ಮಾತನಾಡಿದರು. ತಣ್ಣೀರುಬಾವಿ ಮಸೀದಿ ಅಧ್ಯಕ್ಷರಾದ ಅಬ್ದುಲ್ ರಾಝಿಕ್, ಹೋರಾಟ ಸಮಿತಿಯ ಪ್ರಮುಖರಾದ ಅಜೀಜ್ ತಣ್ಣೀರುಬಾವಿ, ರಿಯಾಜ್ ಬಿ. ಎಚ್, ಜೋಹರ, ಫ್ಲೋರಿನ್, ದೀಪಾ, ಜಯಂತಿ, ರೇಖಾ, ನೌಫಲ್, ರಶೀದ್ ಖಾನ್,ಸಿಮ್ರಾನ್, ಸುಪ್ರಿತಾ ಕವಿತಾ,ಫೌಝಿಯ,ಯೂತ್ ಕ್ಲಬ್ ತಣ್ಣೀರುಬಾವಿ ಅಧ್ಯಕ್ಷರಾದ ನವೀನ್ ಸುವರ್ಣ, ಡಿವೈಎಫ್ಐ ಮುಖಂಡರಾದ ಹನೀಫ್ ಬೆಂಗ್ರೆ, ನಾಸಿರ್ ಬಾಸ್, ತೌಸೀಫ್ ಬೈಕಂಪಾಡಿ, ಫರಾನ್ಯಾಸೀರ್ ಅಂಗರಗುಂಡಿ ಮುಂತಾದವರು ಉಪಸ್ಥಿತರಿದ್ದರು. ದಲಿತ ಹಕ್ಕುಗಳ ಸಮನ್ವಯ ಸಮಿತಿ ಅಧ್ಯಕ್ಷರಾದ ಕೃಷ್ಣ ತಣ್ಣೀರುಬಾವಿ ಸ್ವಾಗತಿಸಿ, ಹೋರಾಟ ಸಮಿತಿ ಅಧ್ಯಕ್ಷೆ ಶಮೀಮಾ ಬಾನು ವಂದಿಸಿದರು ಈ ಸಂದರ್ಭದಲ್ಲಿ ಕೆಐಎಡಿಬಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅವರಿಗೆ ಮನವಿ ಸಲ್ಲಿಸಿ ತಡೆ ಬೇಲಿ ಕಾಮಗಾರಿ ನಿಲ್ಲಿಸುವಂತೆ ಒತ್ತಾಯಿಸಲಾಯಿತು. ಕಾಲಂ ನ್ಯೂಸ್ : ರಸ್ತೆ ದುರಸ್ತಿಗೆ ಇಲ್ಲದ ಹಣ ತಡೆಬೇಲಿ ಹಾಕಲು ಎಲ್ಲಿಂದ ಬಂತು? ಹೊಂಡ ಗುಂಡಿಗಳಿಂದ ತುಂಬಿ ಹೋಗಿರುವ ಕೈಗಾರಿಕಾ ಪ್ರದೇಶದ ರಸ್ತೆ ದುರಸ್ತಿ ಮಾಡಿ ಎಂದು ಪ್ರತಿಭಟನೆ ಮಾಡಿದರೆ ಇಲಾಖೆಯಲ್ಲಿ ದುಡ್ಡಿಲ್ಲ ಎಂದು ಉತ್ತರ ನೀಡುವ ಕೆಐಎಡಿಬಿ ಅಧಿಕಾರಿಗಳಿಗೆ ಬಡವರ ಕಾಲನಿಗೆ ಬೇಲಿ ಹಾಕಲು ಹಣ ಮಂಜೂರು ಎಲ್ಲಿಂದ ಆಯಿತು ಎಂದು ಮನವಿ ಸ್ವೀಕರಿಸಲು ಬಂದ ಅಧಿಕಾರಿಯನ್ನು ಬಿ.ಕೆ ಇಮ್ತಿಯಾಜ್ ಪ್ರಶ್ನಿಸಿದಾಗ ಯಾವುದೇ ಉತ್ತರ ನೀಡದೆ ನುಣುಚಿ ಕೊಂಡರು.
    1
    ತಣ್ಣೀರುಬಾವಿ ಕಡಲು ಮತ್ತು ನದಿ ದಂಡೆಗಳ ನಡುವೆ ಅನೇಕ ವರ್ಷಗಳಿಂದ ಸರಕಾರಿ ಭೂಮಿಯಲ್ಲಿ ವಾಸವಿರುವ ಬಡವರು ಹಕ್ಕು ಪತ್ರ ನೀಡಿ ಬಡವರಿಗೆ ಭೂಮಿಯ ಹಕ್ಕನ್ನು ಖಾತರಿಗೊಳಿಸುವ ಬದಲು ಬಡವರ ಕಾಲನಿಯನ್ನೇ ಬಲಾಡ್ಯರಿಗೆ ಪರಭಾರೆ ಮಾಡಿ ಕೆ.ಐ.ಎ.ಡಿ.ಬಿ ಅಧಿಕಾರಿಗಳು ಬೇಲಿ ಹಾಕಲು ಹೊರಟಿರುವುದು ಬಡವರನ್ನು ಒಕ್ಕಲೆಬ್ಬಿಸುವ ಹುನ್ನಾರವಾಗಿದ್ದು ಇದು ಸಂವಿಧಾನ ಬಾಹಿರ ಎಂದು ಡಿವೈಎಫ್ಐ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷರಾದ ಬಿ.ಕೆ ಇಮ್ತಿಯಾಜ್ ಹೇಳಿದರು ಅವರು ಇಂದು ಬೈಕಂಪಾಡಿಯಲ್ಲಿರುವ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯ ಎದುರು ತಣ್ಣೀರುಬಾವಿ ಜನ ವಸತಿ ಪ್ರದೇಶದಲ್ಲಿ ಕೆಐಎಡಿಬಿ ಅಧಿಕಾರಿಗಳು ಮನೆ ಮತ್ತು ಸಮುದ್ರಕ್ಕೆ ತಡೆಬೇಲಿ ಹಾಕಿರುವ ನೀತಿಯನ್ನು ಖಂಡಿಸಿ ಡಿವೈಎಫ್ಐ ಮಂಗಳೂರು ನಗರ ಸಮಿತಿ, ತಣ್ಣೀರುಬಾವಿ ಹೋರಾಟ ಸಮಿತಿ, ದಲಿತ ಹಕ್ಕುಗಳ ಸಮನ್ವಯ ಸಮಿತಿ ತಣ್ಣೀರುಬಾವಿ ನೇತೃತ್ವದಲ್ಲಿ ನಡೆದ ಪ್ರತಿಭಟನೆ ಉದ್ಘಾಟಿಸಿ ಮಾತನಾಡುತ್ತಿದ್ದರು.
ಬೇಲಿಗಳನ್ನು ಕಟ್ಟಿ ಸಮುದ್ರವನ್ನೇ ನಂಬಿ ಬದುಕುವ ಬಡವರ ಕಡಲ ಸಂಭಂದವನ್ನು ತಡೆಯಲಾಗುತ್ತಿದೆ. ತಣ್ಣೀರುಬಾವಿ ಯಲ್ಲಿ ಹಾಕಿರುವ ಬೇಲಿಗಳನ್ನು ತೆರವುಗೊಳಿಸಲು ಜಿಲ್ಲಾಡಳಿತ ಮುಂದಾಗಬೇಕು ಎಂದು ಆಗ್ರಹಿಸಿದ ಅವರು ಬಡವರಿಗೆ ಕಿರುಕುಳ ಮುಂದುವರಿದರೆ ಹೋರಾಟ ತೀವ್ರಗೊಳಿಸುವ ಎಚ್ಚರಿಕೆ ನೀಡಿದರು.
ಡಿವೈಎಫ್ಐ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ಮಾತನಾಡಿ ಸ್ಥಳೀಯ ಜನಪ್ರತಿನಿದಿನಗಳ ಇಚ್ಛಾಶಕ್ತಿಯ ಕೊರತೆಯಿಂದಾಗಿ ತಣ್ಣೀರುಬಾವಿಯ ನಾಗರಿಕರಿಗೆ ಇನ್ನೂ ಹಕ್ಕು ಪತ್ರ ಸಿಕ್ಕಿಲ್ಲ, ಇವರಿಗೆ ಚುನಾವಣೆ ಬಂದಾಗ ಮಾತ್ರ ಬಡವರು ನೆನಪಾಗ್ತಾರೆ ಎಂದು ಅವರು ಆಪಾದಿಸಿದರು.
ಮಾಜಿ ಕಾಪೋರೇಟರ್ ದಯಾನಂದ ಶೆಟ್ಟಿ, ಹೋರಾಟ ಸಮಿತಿ ಕಾರ್ಯದರ್ಶಿ ಯೋಗೀಶ್ ಅಮೀನ್,ತಣ್ಣೀರುಬಾವಿ,ಡಿವೈಎಫ್ಐ ನಗರ ಕಾರ್ಯದರ್ಶಿ ತಯ್ಯುಬ್ ಬೆಂಗ್ರೆ ಮಾತನಾಡಿದರು. ತಣ್ಣೀರುಬಾವಿ ಮಸೀದಿ ಅಧ್ಯಕ್ಷರಾದ ಅಬ್ದುಲ್ ರಾಝಿಕ್, ಹೋರಾಟ ಸಮಿತಿಯ ಪ್ರಮುಖರಾದ ಅಜೀಜ್ ತಣ್ಣೀರುಬಾವಿ, ರಿಯಾಜ್ ಬಿ. ಎಚ್, ಜೋಹರ, ಫ್ಲೋರಿನ್, ದೀಪಾ, ಜಯಂತಿ, ರೇಖಾ, ನೌಫಲ್, ರಶೀದ್ ಖಾನ್,ಸಿಮ್ರಾನ್, ಸುಪ್ರಿತಾ ಕವಿತಾ,ಫೌಝಿಯ,ಯೂತ್ ಕ್ಲಬ್ ತಣ್ಣೀರುಬಾವಿ ಅಧ್ಯಕ್ಷರಾದ ನವೀನ್ ಸುವರ್ಣ, ಡಿವೈಎಫ್ಐ ಮುಖಂಡರಾದ ಹನೀಫ್ ಬೆಂಗ್ರೆ, ನಾಸಿರ್ ಬಾಸ್, ತೌಸೀಫ್ ಬೈಕಂಪಾಡಿ, ಫರಾನ್ಯಾಸೀರ್ ಅಂಗರಗುಂಡಿ ಮುಂತಾದವರು ಉಪಸ್ಥಿತರಿದ್ದರು.
ದಲಿತ ಹಕ್ಕುಗಳ ಸಮನ್ವಯ ಸಮಿತಿ ಅಧ್ಯಕ್ಷರಾದ ಕೃಷ್ಣ ತಣ್ಣೀರುಬಾವಿ ಸ್ವಾಗತಿಸಿ, ಹೋರಾಟ ಸಮಿತಿ ಅಧ್ಯಕ್ಷೆ ಶಮೀಮಾ ಬಾನು ವಂದಿಸಿದರು 
ಈ ಸಂದರ್ಭದಲ್ಲಿ ಕೆಐಎಡಿಬಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅವರಿಗೆ ಮನವಿ ಸಲ್ಲಿಸಿ ತಡೆ ಬೇಲಿ ಕಾಮಗಾರಿ ನಿಲ್ಲಿಸುವಂತೆ ಒತ್ತಾಯಿಸಲಾಯಿತು.
ಕಾಲಂ ನ್ಯೂಸ್ :
ರಸ್ತೆ ದುರಸ್ತಿಗೆ ಇಲ್ಲದ ಹಣ ತಡೆಬೇಲಿ ಹಾಕಲು ಎಲ್ಲಿಂದ ಬಂತು?
ಹೊಂಡ ಗುಂಡಿಗಳಿಂದ ತುಂಬಿ ಹೋಗಿರುವ ಕೈಗಾರಿಕಾ ಪ್ರದೇಶದ ರಸ್ತೆ ದುರಸ್ತಿ ಮಾಡಿ ಎಂದು ಪ್ರತಿಭಟನೆ ಮಾಡಿದರೆ ಇಲಾಖೆಯಲ್ಲಿ ದುಡ್ಡಿಲ್ಲ ಎಂದು ಉತ್ತರ ನೀಡುವ ಕೆಐಎಡಿಬಿ ಅಧಿಕಾರಿಗಳಿಗೆ ಬಡವರ ಕಾಲನಿಗೆ ಬೇಲಿ ಹಾಕಲು ಹಣ ಮಂಜೂರು ಎಲ್ಲಿಂದ ಆಯಿತು ಎಂದು ಮನವಿ ಸ್ವೀಕರಿಸಲು ಬಂದ ಅಧಿಕಾರಿಯನ್ನು ಬಿ.ಕೆ ಇಮ್ತಿಯಾಜ್ ಪ್ರಶ್ನಿಸಿದಾಗ ಯಾವುದೇ ಉತ್ತರ ನೀಡದೆ ನುಣುಚಿ ಕೊಂಡರು.
    user_Shamsheer Budoli
    Shamsheer Budoli
    Local News Reporter ಮಂಗಳೂರು, ದಕ್ಷಿಣ ಕನ್ನಡ, ಕರ್ನಾಟಕ•
    13 hrs ago
  • ಅರಕಲಗೂಡು ತಾಲ್ಲೂಕಿನ ಜೋಡಿಗುಬ್ಬಿ ಕ್ರಾಸ್‌ ಬಳಿ ಘಟನೆ ಅರಕಲಗೂಡ ತಾಲ್ಲೂಕಿನ ಹೆತ್ತಗೌಡನಹಳ್ಳಿ ಗ್ರಾಮದ ಇಬ್ಬರು ಯುವಕರ ಮೇಲೆ ಮಾರಣಾಂತಿಕ ಹಲ್ಲೆ ಹೊಳೆನರಸೀಪುರ ತಾಲ್ಲೂಕಿನ ಕೆರೆಗೋಡು ಗ್ರಾಮದ ಮೂವರಿಂದ ಹಲ್ಲೆ ಅರಕಲಗೂಡು ಪೋಲೀಸ್'ರು ಸ್ಥಳಕ್ಕೆ ಭೇಟಿ , ಪರಿಶೀಲನೆ
    1
    ಅರಕಲಗೂಡು ತಾಲ್ಲೂಕಿನ ಜೋಡಿಗುಬ್ಬಿ ಕ್ರಾಸ್‌ ಬಳಿ ಘಟನೆ 
ಅರಕಲಗೂಡ ತಾಲ್ಲೂಕಿನ ಹೆತ್ತಗೌಡನಹಳ್ಳಿ ಗ್ರಾಮದ ಇಬ್ಬರು ಯುವಕರ ಮೇಲೆ ಮಾರಣಾಂತಿಕ ಹಲ್ಲೆ
ಹೊಳೆನರಸೀಪುರ ತಾಲ್ಲೂಕಿನ ಕೆರೆಗೋಡು ಗ್ರಾಮದ ಮೂವರಿಂದ ಹಲ್ಲೆ 
ಅರಕಲಗೂಡು ಪೋಲೀಸ್'ರು ಸ್ಥಳಕ್ಕೆ ಭೇಟಿ , ಪರಿಶೀಲನೆ
    user_News5Kannada
    News5Kannada
    Local News Reporter Arkalgud, Hassan•
    15 hrs ago
  • Post by Suresh Belagere
    1
    Post by Suresh Belagere
    user_Suresh Belagere
    Suresh Belagere
    Video Creator ಚಿತ್ರದುರ್ಗ, ಚಿತ್ರದುರ್ಗ, ಕರ್ನಾಟಕ•
    18 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.