ಬೆಂಗಳೂರು-ಬೆಳಗಾವಿ ಮಾರ್ಗ ಸೇರಿ ಮೂರು ವಂದೇ ಭಾರತ್ ರೈಲಿಗೆ ಪ್ರಧಾನಿ ಮೋದಿ ಹಸಿರು ನಿಶಾನೆ - PM FLAGS OFF VANDE BHARAT EXPRESS ಕೆಎಸ್ಆರ್ ರೈಲು ನಿಲ್ದಾಣದಲ್ಲಿ ಮೂರು ವಂದೇ ಭಾರತ್ ಎಕ್ಸ್ ಪ್ರೆಸ್ ರೈಲುಗಳಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಗ್ರೀನ್ ಸಿಗ್ನಲ್ ನೀಡಿದರು.ಬೆಂಗಳೂರು: ಪ್ರಧಾನಮಂತ್ರಿ ನರೇಂದ್ರ ಮೋದಿ ಬೆಂಗಳೂರಿನ ಕೆಎಸ್ಆರ್ ರೈಲು ನಿಲ್ದಾಣದಲ್ಲಿ ಮೂರು ವಂದೇ ಭಾರತ್ ಎಕ್ಸ್ ಪ್ರೆಸ್ ರೈಲುಗಳಿಗೆ ಹಸಿರು ನಿಶಾನೆ ತೋರಿದರು. ಬೆಂಗಳೂರಿನಿಂದ ಬೆಳಗಾವಿ, ಅಮೃತಸರದಿಂದ ಮಾತಾ ವೈಷ್ಣೋದೇವಿ ಕತ್ರಾ ಮತ್ತು ನಾಗ್ಪುರ (ಅಜ್ನಿ) ದಿಂದ ಪುಣೆ ಹೋಗುವ ಮೂರು ವಂದೇ ಭಾರತ್ಗೆ ಹಸಿರು ನಿಶಾನೆ ತೋರಿದರು. ಈ ಹೈಸ್ಪೀಡ್ ರೈಲುಗಳು ಪ್ರಾದೇಶಿಕ ಸಂಪರ್ಕವನ್ನು ಹೆಚ್ಚಿಸಲಿದೆ. ಬಹುನಿರೀಕ್ಷಿತ ಬೆಂಗಳೂರು-ಬೆಳಗಾವಿ ವಂದೇ ಭಾರತ್ ರೈಲು ರಾಜ್ಯದ 11ನೇ ಹೊಸ ವಂದೇ ಭಾರತ್ ರೈಲು ಸೇವೆಯಾಗಿದೆ. ಬೆಳಗಾವಿ-ಬೆಂಗಳೂರು ಮಾರ್ಗವನ್ನು ಈ ವಂದೇ ಭಾರತ್ ರೈಲು ಸುಮಾರು 8.50 ಗಂಟೆಗಳಲ್ಲಿ ಕ್ರಮಿಸಲಿದೆ. ವಿದ್ಯಾರ್ಥಿಗಳ ಜೊತೆ ಸಂವಾದ : ಇದೇ ವೇಳೆ ನೂತನ ವಂದೇ ಭಾರತ್ ರೈಲು ಒಳಗೆ ಹೆಜ್ಜೆ ಹಾಕಿದ ಪ್ರಧಾನಿ ಮೋದಿ ಅವರು ಕೂತಿದ್ದ ವಿದ್ಯಾರ್ಥಿಗಳ ಜೊತೆ ಸಂವಾದ ನಡೆಸಿ ಖುಷಿ ಹಂಚಿಕೊಂಡರು. ಬೆಂಗಳೂರಿನ ಕೆಎಸ್ಆರ್ ರೈಲು ನಿಲ್ದಾಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಸಿಎಂ ಸಿದ್ದರಾಮಯ್ಯ, ರೈಲ್ವೆ ಸಚಿವ ಅಶ್ವಿನಿ ವೈಷ್ಣವ್, ವಿ. ಸೋಮಣ್ಣ, ಸಚಿವ ದಿನೇಶ್ ಗುಂಡೂರಾವ್, ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ, ಸಂಸದ ಪಿ. ಸಿ. ಮೋಹನ್ ಉಪಸ್ಥಿತರಿದ್ದರು. ವಾರದಲ್ಲಿ 6 ದಿನ ಸಂಚಾರ: ಬುಧವಾರ ಹೊರತುಪಡಿಸಿ ವಾರದ ಆರು ದಿನಗಳಲ್ಲಿ ವಂದೇ ಭಾರತ್ ಬೆಂಗಳೂರು-ಬೆಳಗಾವಿ ಸಂಚರಿಸಲಿದೆ. ಪ್ರತಿದಿನ ಬೆಳಗ್ಗೆ 5.20ಕ್ಕೆ ಬೆಳಗಾವಿಯಿಂದ ಹೊರಡಲಿರುವ ವಂದೇ ಭಾರತ್ ಮಧ್ಯಾಹ್ನ 1.50ಕ್ಕೆ ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ (ಕೆಎಸ್‌ಆರ್) ರೈಲು ನಿಲ್ದಾಣಕ್ಕೆ ತಲುಪಲಿದೆ. ಮತ್ತೆ ಮಧ್ಯಾಹ್ನ 2.20ಕ್ಕೆ ಕೆಎಸ್‌ಆರ್ ಬೆಂಗಳೂರಿನಿಂದ ವಾಪಸ್ ಹೊರಡಲಿದ್ದು, ರಾತ್ರಿ 10.40ಕ್ಕೆ ಬೆಳಗಾವಿ ತಲುಪಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ನಿಲುಗಡೆ ಎಲ್ಲೆಲ್ಲಿ? ಬೆಳಗಾವಿಯಿಂದ ಬರುವಾಗ ಧಾರವಾಡ, ಎಸ್‌ಎಸ್‌ಎಸ್ ಹುಬ್ಬಳ್ಳಿ, ಎಸ್‌ಎಂಎಂ ಹಾವೇರಿ, ದಾವಣಗೆರೆ, ತುಮಕೂರು, ಯಶವಂತಪುರ ರೈಲು ನಿಲ್ದಾಣಗಳಲ್ಲಿ ನಿಲುಗಡೆ ಇರಲಿದೆ. ಬೆಂಗಳೂರಿನಿಂದ ಹೊರಡುವ ರೈಲು ಮಧ್ಯಾಹ್ನ 2.28ಕ್ಕೆ ಹೊರಟು ಯಶವಂತಪುರ, ತುಮಕೂರು, ದಾವಣಗೆರೆ, ಎಸ್ಎಂಎಂ ಹಾವೇರಿ, ಎಸ್ಎಸ್ಎಸ್ ಹುಬ್ಬಳ್ಳಿ ಹಾಗೂ ಧಾರವಾಡದಲ್ಲಿ ನಿಲುಗಡೆಯಾಗಲಿದೆ. ದರ ಹೀಗಿದೆ: ಸುಮಾರು 8 ಜಿಲ್ಲೆಗಳನ್ನು ಹಾದು ಹೋಗುವ ಬೆಂಗಳೂರು-ಬೆಳಗಾವಿ ವಂದೇ ಭಾರತ್ ರೈಲು 8 ಬೋಗಿಗಳನ್ನು ಒಳಗೊಂಡಿದೆ. ಇದರಲ್ಲಿ 4 ಮೋಟಾರ್ ಕಾರ್, 1 ಟ್ರೈಲಿಂಗ್ ಕಾರ್, 1 ಎಕ್ಸಿಕ್ಯುಟಿವ್ ಕ್ಲಾಸ್/ಟ್ರೈಲಿಂಗ್ ಕಾರ್ ಮತ್ತು 2 ಡ್ರೈವಿಂಗ್ ಟ್ರೈಲರ್ ಕಾರ್‌ಗಳನ್ನು ಹೊಂದಿರಲಿದೆ. ಬೆಂಗಳೂರು-ಬೆಳಗಾವಿ ಚೇರ್ ಕಾರ್ (ಸಿಸಿ) ಟಿಕಿಟ್ ದರ 1,264 ರೂ. ಹಾಗೂ ಎಕ್ಸಿಕ್ಯುಟಿವ್ ಚೇರ್ ಕಾರ್ (ಇಸಿ) ಟಿಕೆಟ್ ದರ 2,535 ರೂ. ಇರಲಿದೆ.

- https://shuru.co.in/dl/Vo7Bdx ಹಾನಗಲ್.... ಹೊಸ ಬಜಾಜ್ 150 LED ಬೈಕ್ ಲಾಂಚ್ ಉದ್ಘಾಟನೆಗೊಂಡಿತು. ಪಟ್ಟಣದ ಶ್ರೀ ಶಿವಲಿಂಗೇಶ್ವರ ಬಜಾಜ್ ಶೋ,ರೂಂನಲ್ಲಿ ವ್ಯಾಪಾರಸ್ಥರ ಸಂಘದ ತಾಲೂಕು ಅಧ್ಯಕ್ಷ ಗುರುರಾಜ್ ನಿಂಗೋಜಿ ದೀಪ ಬೆಳಗಿಸುವುದರೊಂದಿಗೆ ಚಾಲನೆ ನೀಡಿದರು. ಈ ವೇಳೆ ಬಜಾಜ್ ಶೋರೂಂ ಮಾಲಕರಾದ ಶಿವಬಸವೇಶ್ವರ, ಸೇರಿದಂತೆ ಮಾಜಿ ಪುರಸಭೆ ಅಧ್ಯಕ್ಷ ಪರಶುರಾಮ ಖಂಡೂನವರ, ವಿರಪಾಕ್ಷಪ್ಪ ಖಡಬಗೇರಿ, ನ್ಯಾಯವಾದಿ ಪವಾರ, ಸುರೇಶ ನಾಗಣ್ಣನವರ ಇತರರಿದ್ದರು1
- ಕೆಎಸ್ಸಾರ್ಟಿಸಿ ಬಸ್‌ಗೆ ಚಾಲನೆ ನೀಡಿದ ಸಚಿವ ಎಸ್ ಮಧು ಬಂಗಾರಪ್ಪ ಸೊರಬ: ಸೊರಬ-ಕರಡಿಗೆರೆ-ಜಂಬೆಹಳ್ಳಿ-ಕAತನಹಳ್ಳಿ-ಗುಡವಿ-ಬಳ್ಳಿಬೈಲು-ದುಗ್ಲಿಹೊಸೂರು-ಸAಪಗೋಡು-ನರೂರು-ಎಡ್ರಬೈಲು ಮಾರ್ಗದ ಕೆಎಸ್ಸಾರ್ಟಿಸಿ ಬಸ್‌ಗೆ ಸಚಿವ ಎಸ್ ಮಧುಬಂಗಾರಪ್ಪ ಶುಕ್ರವಾರ ಪಟ್ಟಣದ ಬಂಗಾರಧಾಮದ ಆವರಣದಲ್ಲಿ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು ರಾಜ್ಯ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯಿಂದ ಶಕ್ತಿ ಯೋಜನೆಯಿಂದಾಗಿ ಪ್ರಯಾಣಿಕರ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗಿದೆ. ಮಹಿಳೆಯರ ಪ್ರಯಾಣವು ಹೆಚ್ಚಾಗಿದ್ದು, ಸಾರಿಗೆ ನಿಗಮಗಳ ಆದಾಯದಲ್ಲಿ ಹೆಚ್ಚಳವಾಗಿದೆ. ದೈನಂದಿನ ಪ್ರಯಾಣ ವೆಚ್ಚ ಉಳಿತಾಯವಾಗಿ ಆ ಹಣವನ್ನು ಇತರೆ ಅಗತ್ಯತೆಗಳಿಗೆ ಬಳಸಿಕೊಳ್ಳಬಹುದಾಗಿದ್ದು, ಶಕ್ತಿ ಯೋಜನೆ ಪ್ರಯಾಣ ಅಷ್ಟೇ ಅಲ್ಲದೇ ಮಹಿಳೆಯರ ಆರ್ಥಿಕ ಸ್ವಾವಲಂಬನೆ ಹೊಂದಲು ಸಾಧ್ಯವಾಗಿದೆ. ಅಲ್ಲದೇ ವಿದ್ಯಾರ್ಥಿಗಳಿಗೂ ಅನುಕೂಲವಾಗಿದೆ. ಜನವರಿ ತಿಂಗಳ ಅಂತ್ಯದೊಳಗೆ ರಾಜ್ಯದ ಎಲ್ಲಾ ರಸ್ತೆಗಳನ್ನು ಗುಂಡಿಮುಕ್ತಗೊಳಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸೂಚಿಸಿದ್ದಾರೆ. ಹಾಗಾಗಿ ಸೊರಬ ಕ್ಷೇತ್ರದ ಅಭಿವೃದ್ಧಿ ಕಾರ್ಯಕ್ಕೆ ಬಿಡುಗಡೆಯಗಿರುವ 50 ಕೋಟಿ ರೂಪಾಯಿಗಳಲ್ಲಿ 45 ಕೋಟಿ ರೂಪಾಯಿಗಳನ್ನು ರಸ್ತೆ ಅಭಿವೃದ್ಧಿಗೆ ಬಳಸಲಾಗುತ್ತಿದ್ದು, ಈಗಾಗಲೇ ಕಾಮಗಾರಿ ಆರಂಭಿಸಲಾಗಿದೆ. ಗ್ರಾಮೀಣ ಜನರ ಬೇಡಿಕೆಯ ಹಿನ್ನೆಲೆಯಲ್ಲಿ ಕ್ಷೇತ್ರದಾದ್ಯಂತ ಇನ್ನೂ 15 ಸಾರಿಗೆ ಬಸ್ ವ್ಯವಸ್ಥೆ ಕಲ್ಪಿಸಲಾಗುವುದು. ಈ ಸಂದರ್ಭದಲ್ಲಿ ವಿಭಾಗೀಯ ಸಂಚಲನಾಧಿಕಾರಿ ದಿನೇಶ ಕುಮಾರ್ ಚನ್ನಗಿರಿ, ಸಾಗರ ಘಟಕ ವ್ಯವಸ್ಥಾಪಕ ಶ್ರೀಶೈಲ ಬಿರಾದಾರ, ಸಂಚಾರ ನಿಯಂತ್ರಕ ರುದ್ರೇಶ ನಂದೂರು, ಶಿರಸಿ ಶಾಸಕ ಭೀಮಣ್ಣನಾಯ್ಕ್, ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಚಂದ್ರಭೂಪಾಲ, ತಾಲೂಕು ಅಧ್ಯಕ್ಷ ಜಯಶೀಲಗೌಡ ಅಂಕರವಳ್ಳಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಡಿ.ಬಿ ಅಣ್ಣಪ್ಪ ಹಾಲಘಟ್ಟ, ಸದಾನಂದಗೌಡ ಬಿಳಗಲಿ, ಪ್ರಮುಖರಾದ ಹೆಚ್ ಗಣಪತಿ, ಎಂ.ಡಿ ಶೇಖರ್, ಕೆ.ವಿ ಗೌಡ, ಶಿವಲಿಂಗೇಗೌಡ, ಕಲ್ಲಂಬಿ ಹಿರಿಯಣ್ಣ, ಶ್ರೀಕಾಂತ ಚಿಕ್ಕಶಕುನ, ಅತಿಕುರ್ ರೆಹಮಾನ್ ಮತ್ತಿತತರಿದ್ದರು. ಕೆಎಸ್ಸಾರ್ಟಿಸಿ ಬಸ್‌ಗೆ ಚಾಲನೆ ನೀಡಿದ ಸಚಿವ ಎಸ್ ಮಧು ಬಂಗಾರಪ್ಪ ಸೊರಬ: ಸೊರಬ-ಕರಡಿಗೆರೆ-ಜಂಬೆಹಳ್ಳಿ-ಕoತನಹಳ್ಳಿ-ಗುಡವಿ-ಬಳ್ಳಿಬೈಲು-ದುಗ್ಲಿಹೊಸೂರು-ಸoಪಗೋಡು-ನರೂರು-ಎಡ್ರಬೈಲು ಮಾರ್ಗದ ಕೆಎಸ್ಸಾರ್ಟಿಸಿ ಬಸ್‌ಗೆ ಸಚಿವ ಎಸ್ ಮಧುಬಂಗಾರಪ್ಪ ಶುಕ್ರವಾರ ಪಟ್ಟಣದ ಬಂಗಾರಧಾಮದ ಆವರಣದಲ್ಲಿ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು ರಾಜ್ಯ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯಿಂದ ಶಕ್ತಿ ಯೋಜನೆಯಿಂದಾಗಿ ಪ್ರಯಾಣಿಕರ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗಿದೆ. ಮಹಿಳೆಯರ ಪ್ರಯಾಣವು ಹೆಚ್ಚಾಗಿದ್ದು, ಸಾರಿಗೆ ನಿಗಮಗಳ ಆದಾಯದಲ್ಲಿ ಹೆಚ್ಚಳವಾಗಿದೆ. ದೈನಂದಿನ ಪ್ರಯಾಣ ವೆಚ್ಚ ಉಳಿತಾಯವಾಗಿ ಆ ಹಣವನ್ನು ಇತರೆ ಅಗತ್ಯತೆಗಳಿಗೆ ಬಳಸಿಕೊಳ್ಳಬಹುದಾಗಿದ್ದು, ಶಕ್ತಿ ಯೋಜನೆ ಪ್ರಯಾಣ ಅಷ್ಟೇ ಅಲ್ಲದೇ ಮಹಿಳೆಯರ ಆರ್ಥಿಕ ಸ್ವಾವಲಂಬನೆ ಹೊಂದಲು ಸಾಧ್ಯವಾಗಿದೆ. ಅಲ್ಲದೇ ವಿದ್ಯಾರ್ಥಿಗಳಿಗೂ ಅನುಕೂಲವಾಗಿದೆ. ಜನವರಿ ತಿಂಗಳ ಅಂತ್ಯದೊಳಗೆ ರಾಜ್ಯದ ಎಲ್ಲಾ ರಸ್ತೆಗಳನ್ನು ಗುಂಡಿಮುಕ್ತಗೊಳಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸೂಚಿಸಿದ್ದಾರೆ. ಹಾಗಾಗಿ ಸೊರಬ ಕ್ಷೇತ್ರದ ಅಭಿವೃದ್ಧಿ ಕಾರ್ಯಕ್ಕೆ ಬಿಡುಗಡೆಯಗಿರುವ 50 ಕೋಟಿ ರೂಪಾಯಿಗಳಲ್ಲಿ 45 ಕೋಟಿ ರೂಪಾಯಿಗಳನ್ನು ರಸ್ತೆ ಅಭಿವೃದ್ಧಿಗೆ ಬಳಸಲಾಗುತ್ತಿದ್ದು, ಈಗಾಗಲೇ ಕಾಮಗಾರಿ ಆರಂಭಿಸಲಾಗಿದೆ. ಗ್ರಾಮೀಣ ಜನರ ಬೇಡಿಕೆಯ ಹಿನ್ನೆಲೆಯಲ್ಲಿ ಕ್ಷೇತ್ರದಾದ್ಯಂತ ಇನ್ನೂ 15 ಸಾರಿಗೆ ಬಸ್ ವ್ಯವಸ್ಥೆ ಕಲ್ಪಿಸಲಾಗುವುದು. ಈ ಸಂದರ್ಭದಲ್ಲಿ ವಿಭಾಗೀಯ ಸಂಚಲನಾಧಿಕಾರಿ ದಿನೇಶ ಕುಮಾರ್ ಚನ್ನಗಿರಿ, ಸಾಗರ ಘಟಕ ವ್ಯವಸ್ಥಾಪಕ ಶ್ರೀಶೈಲ ಬಿರಾದಾರ, ಸಂಚಾರ ನಿಯಂತ್ರಕ ರುದ್ರೇಶ ನಂದೂರು, ಶಿರಸಿ ಶಾಸಕ ಭೀಮಣ್ಣನಾಯ್ಕ್, ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಚಂದ್ರಭೂಪಾಲ, ತಾಲೂಕು ಅಧ್ಯಕ್ಷ ಜಯಶೀಲಗೌಡ ಅಂಕರವಳ್ಳಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಡಿ.ಬಿ ಅಣ್ಣಪ್ಪ ಹಾಲಘಟ್ಟ, ಸದಾನಂದಗೌಡ ಬಿಳಗಲಿ, ಪ್ರಮುಖರಾದ ಹೆಚ್ ಗಣಪತಿ, ಎಂ.ಡಿ ಶೇಖರ್, ಕೆ.ವಿ ಗೌಡ, ಶಿವಲಿಂಗೇಗೌಡ, ಕಲ್ಲಂಬಿ ಹಿರಿಯಣ್ಣ, ಶ್ರೀಕಾಂತ ಚಿಕ್ಕಶಕುನ, ಅತಿಕುರ್ ರೆಹಮಾನ್ ಮತ್ತಿತರರಿದ್ದರು.4
- ಯಾದಗಿರಿ ಜಿಲ್ಲಾ ಸುರಪುರ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರಾದ ನರಸಿಂಹ ನಾಯಕ (ರಾಜುಗೌಡ) ಮತ್ತು ಅವರ ಸಹೋದರ ಹನುಮಂತ ನಾಯಕ (ಬಬ್ಲು ಗೌಡ )ಅವರ ಜನ್ಮದಿನದ ಪ್ರಯುಕ್ತವಾಗಿ ಸುರಪುರ ನಗರದ ಗಾಂಧಿ ವೃತ್ತದಲ್ಲಿ ಅನ್ನದಾಸೊಹ ಕಾರ್ಯಕ್ರಮಕ್ಕೆ ಮಾಜಿ ಜಿ. ಪಂ. ಅಧ್ಯಕ್ಷ ರಾಜಾ ಹನುಮಪ್ಪನಾಯಕ(ತಾತಾ ) ಚಾಲನೆ ನೀಡಿದರು.1
- ಬಳಗಾನೂರು ಪೋಲೀಸರು ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಗಾಂಜಾ ಸಮೇತ ಗಾಂಜಾ ಮಾರಾಟ ಮಾಡುವ ಹಾಗೂ ಖರೀದಿ ಮಾಡುವವರು ಸೇರಿದಂತೆ ಮೂರು ಜನರನ್ನು ಬಂಧಿಸಲಾಗಿದೆ. ಮಾನ್ವಿ ತಾಲ್ಲೂಕಿನ ತಡಕಲ್ ಗ್ರಾಮದ ಅಂಬಣ್ಣ ಕುರಬರ ತಾಲ್ಲೂಕಿನ ಕ್ಯಾಂಪನಲ್ಲಿರುವ ಬಾಲ್ಯಾವಸ್ಥೆಯಲ್ಲಿ ದಿದ್ದಿಗಿ ಗ್ರಾಮದ ಮೌನೇಶ. ಕುರಬರು. ಸಿದ್ದಪ್ಪ ಕುರಬರು. ಬಾಲಯ್ಯ ಇವರಿಗೆ ಗಂಜಾ ಮಾರಾಟ ಮಾಡುತ್ತಿದ್ದ ವೇಳೆ ಸಿಕ್ಕಿ ಬಿದ್ದಿದ್ದಾರೆ. ದಾಳಿಂಬೆಳೆ124 ಗ್ರಾಂ ಗಾಂಜಾ ವಶಪಡಿಸಿಕೊಂಡು ಪ್ರಕರಣ ದಾಖಲಿಸಿದ್ದಾರೆ..1
- *ಭಾರತ ನಲ್ಲಿ ವೈರಲ್*1
- ಮಳವಳ್ಳಿಯಲ್ಲಿ ರಾಜ್ಯಮಟ್ಟದ ಆರಾಧ್ಯ ಪ್ರೀಮಿಯರ್ ಆವೃತ್ತಿ- ೯ ರಾಜ್ಯ ಮಟ್ಟದ ೨ ದಿನಗಳ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಗೆ ಆರಾಧ್ಯ ಬ್ರಿಗೇಡ್ ಕರ್ನಾಟಕ ಸಂಘಟನೆ ಸಂಸ್ಥಾಪಕ ರಾಜ್ಯಾಧ್ಯಕ್ಷ ಅಧ್ಯಕ್ಷ ಪ್ರತಿದ್ವನಿ ಪ್ರಸಾದ್ ಚಾಲನೆ ಮಳವಳ್ಳಿ: ಮಾನಸಿಕ ಮತ್ತು ದೈಹಿಕವಾಗಿ ಕ್ರೀಡೆಗಳು ಮನರಂಜನೆ ನೀಡುವುದರೊಂದಿಗೆ ಸರ್ವರನ್ನು ಒಂದೂಗೂಡಿಸಿ ಬಾಂಧವ್ಯ ಬೆಸೆಯುವ ದಾರಿ ದೀಪವಾಗಿದೆ ಎಂದು ಆರಾಧ್ಯ ಬ್ರಿಗೇಡ್ ಕರ್ನಾಟಕ ಸಂಘಟನೆ ಸಂಸ್ಥಾಪಕ ರಾಜ್ಯಾಧ್ಯಕ್ಷ ಅಧ್ಯಕ್ಷ ಪ್ರತಿದ್ವನಿ ಪ್ರಸಾದ್ ತಿಳಿಸಿದರು. ಪಟ್ಟಣದ ಭಕ್ತ ಕನಕದಾಸ ಕ್ರೀಡಾಂಗಣದಲ್ಲಿ ಅರಾಧ್ಯ ಟೈಟನ್ಸ್,ರಾಮನಗರ ಜಿಲ್ಲಾ ಆರಾಧ್ಯ ಮಹಾಸಭಾ,ರಾಜ್ಯ ಆರಾಧ್ಯ ಜ್ಯೋತಿಷ್ಯ ಮತ್ತು ಪುರೋಹಿತರ ಸಂಘ,ರಾಜ್ಯ ಅರಾಧ್ಯ ಯುವಜನ ಸಮಿತಿ, ಆರಾಧ್ಯ ಆರಾಧ್ಯ ಬ್ರಿಗೇಡ್ ಕರ್ನಾಟಕ ಸಹಯೋಗದಲ್ಲಿ ಅಯೋಜಿಸಿದ್ದ “ ಆರಾಧ್ಯ ಪ್ರೀಮಿಯರ್ ಆವೃತ್ತಿ- ೯ರ ರಾಜ್ಯ ಮಟ್ಟದ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಯನ್ನು” ಉದ್ಘಾಟಿಸಿ ಮಾತನಾಡಿದ ಅವರು, ಒತ್ತಡ ಜೀವನ ನಡೆಸುತ್ತಿರುವ ಪ್ರಸ್ತುತ ಸಂದರ್ಭದಲ್ಲಿ ಯೋಗ ಹಾಗೂ ಕ್ರೀಡೆ ಪ್ರತಿಯೊಬ್ಬರಿಗೂ ಅತ್ಯವಶ್ಯಕವಾಗಿದೆ ಎಂದರು. ಕ್ರೀಡೆಯಲ್ಲಿ ಗೆಲುವು ಸೋಲನ್ನು ಸಮಾನಾಗಿ ಸ್ವೀಕರಿಸಿಸುವುದರ ಜೊತೆಗೆ ಸ್ನೇಹಕ್ಕೆ ಪೂರಕವಾಗುವಂತೆ ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜನೆ ಮಾಡಲಾಗುತ್ತಿದೆ. ಆರಾಧ್ಯ ಸಮುದಾಯದ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವುದರ ಮೂಲಕ ಯಶಸ್ವಿಗೊಳಿಸಬೇಕೆಂದರು. ಈ ಸಂದರ್ಭದಲ್ಲಿ ರಾಜ್ಯ ಆರಾಧ್ಯ ಜ್ಯೋತಿಷ್ಯ ಮತ್ತು ಪುರೋಹಿತರ ಸಂಘದ ಅಧ್ಯಕ್ಷರಾದ ಅಂಚೇದೊಡ್ಡಿ ನಾಗಭೂಷಣ್ ಆರಾಧ್ಯ ರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ,ಪೂಜೆ ಪುರಸ್ಕಾರಕ್ಕೆ ಮಾತ್ರ ಸೀಮಿತಗೊಳ್ಳದೇ ಕ್ರೀಡೆಯಲ್ಲಿಯೂ ಯುವಕರಲ್ಲಿ ಆಶಕ್ತಿ ಮೂಡಿಸುವ ಉದ್ದೇಶದಿಂದ ಪಂದ್ಯಾವಳಿಯನ್ನು ಆಯೋಜನೆ ಮಾಡಲಾಗುತ್ತಿದೆ. ಕ್ರೀಡೆ ಜೊತೆಗೆ ಹಲವಾರು ಜ್ಯೋತಿಷ್ಯಕ್ಕೆ ಸಂಬAಧಿಸಿದ ಕಾರ್ಯಗಾರಗಳನ್ನು ಸಂಘದ ವತಿಯಿಂದ ಹಮ್ಮಿಕೊಂಡು ಬರಲಾಗುತ್ತಿದೆ ಎಂದು ಹೇಳಿದರು. ಹಿರಿಯ ಜೋತಿಷ್ಯಿ ಮಹೇಶ್ ಬುದ್ದಿ ಮಾತನಾಡಿ, ತಾಲ್ಲೂಕಿನಲ್ಲಿ ಪ್ರಥಮಭಾರಿಗೆ ಕ್ರಿಕೆಟ್ ಪಂದ್ಯಾವಳಿ ಆಯೋಜನೆ ಮಾಡುವುದು ಉತ್ತಮ ಬೆಳವಣಿಗೆಯಾಗಿದೆ. ಮುಂದಿನ ದಿನಗಳಲ್ಲಿ ಇದೇ ರೀತಿ ಮುಂದುವರೆಯಲಿ ಎಂದು ಆಶೀಸಿದರು. ಕ್ರಿಕೆಟ್ ಪಂದ್ಯಾವಳಿಯಲ್ಲಿ ಬೆಂಗಳೂರು, ರಾಮನಗರ, ಮಂಡ್ಯ, ಮೈಸೂರು, ಚಾಮರಾಜನಗರ, ನಂಜನಗೂಡು, ಹೆಚ್.ಡಿ ಕೋಟೆ, ಗುಡ್ಲುಪೇಟೆ, ಹುಣಸೂರು ಅನೆಕಲ್ ಸೇರಿದಂತೆ ವಿವಿಧ ಜಿಲ್ಲೆಗಳಿಂದ ತಂಡಗಳು ಭಾಗವಹಿಸಿದ್ದವು. ಕಾರ್ಯಕ್ರಮದಲ್ಲಿ ರಾಮನಗರ ಆರಾಧ್ಯ ಮಹಾಸಭಾ ಅಧ್ಯಕ್ಷ ಸಿದ್ದರಾಮಾರಾಧ್ಯ, ಆರಾಧ್ಯ ಯುವಜನ ಸಮಿತಿ ಅಧ್ಯಕ್ಷ ರೇವಣಾರಾಧ್ಯ,ಆರಾಧ್ಯ ಟೈಟಾನ್ಸ್ ತಂಡದ ಮಾಲೀಕ ಉಮೇಶ್ ಆರಾಧ್ಯ ಸೇರಿದಂತೆ ವಿವಿದ ಜಿಲ್ಲೆಗಳಿಂದ ಅಗಮಿಸಿದ ೯ಕ್ಕೂ ಹೆಚ್ಚು ತಂಡಗಳು ನೂರಾರು ಕ್ರೀಡಾಪಟುಗಳು,ವಿವಿಧ ಜಿಲ್ಲೆಗಳಮುಖಂಡರು ಉಪಸ್ಥಿತರಿದ್ದರು. ಚಿತ್ರ-೨೭-೨ ಮಳವಳ್ಳಿಯಲ್ಲಿ ರಾಜ್ಯಮಟ್ಟದ ಆರಾಧ್ಯ ಪ್ರೀಮಿಯರ್ ಆವೃತ್ತಿ- ೯ ರಾಜ್ಯ ಮಟ್ಟದ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಗೆ ಆರಾಧ್ಯ ಬ್ರಿಗೇಡ್ ಕರ್ನಾಟಕ ಸಂಘಟನೆ ಸಂಸ್ಥಾಪಕ ರಾಜ್ಯಾಧ್ಯಕ್ಷ ಅಧ್ಯಕ್ಷ ಪ್ರತಿದ್ವನಿ ಪ್ರಸಾದ್ ಚಾಲನೆ ನೀಡಿದರು.1
- ಭಾಲ್ಕಿ: ಗೋಸೇವೆಯ ಮೂಲಕ ಹುಟ್ಟುಹಬ್ಬ ಆಚರಿಸಿಕೊಂಡ ಯುವ ನಾಯಕ ಪ್ರಸನ್ನ ಖಂಡ್ರೆ #Bhalki #PrasannaKhandre #BJPKarnataka #GoSeva #SimpleBirthday #SocialService #KarnatakaPolitics1
- ಕೆಎಸ್ಸಾರ್ಟಿಸಿ ಬಸ್‌ಗೆ ಚಾಲನೆ ನೀಡಿದ ಸಚಿವ ಎಸ್ ಮಧು ಬಂಗಾರಪ್ಪ ಸೊರಬ: ಸೊರಬ-ಕರಡಿಗೆರೆ-ಜಂಬೆಹಳ್ಳಿ-ಕAತನಹಳ್ಳಿ-ಗುಡವಿ-ಬಳ್ಳಿಬೈಲು-ದುಗ್ಲಿಹೊಸೂರು-ಸAಪಗೋಡು-ನರೂರು-ಎಡ್ರಬೈಲು ಮಾರ್ಗದ ಕೆಎಸ್ಸಾರ್ಟಿಸಿ ಬಸ್‌ಗೆ ಸಚಿವ ಎಸ್ ಮಧುಬಂಗಾರಪ್ಪ ಶುಕ್ರವಾರ ಪಟ್ಟಣದ ಬಂಗಾರಧಾಮದ ಆವರಣದಲ್ಲಿ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು ರಾಜ್ಯ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯಿಂದ ಶಕ್ತಿ ಯೋಜನೆಯಿಂದಾಗಿ ಪ್ರಯಾಣಿಕರ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗಿದೆ. ಮಹಿಳೆಯರ ಪ್ರಯಾಣವು ಹೆಚ್ಚಾಗಿದ್ದು, ಸಾರಿಗೆ ನಿಗಮಗಳ ಆದಾಯದಲ್ಲಿ ಹೆಚ್ಚಳವಾಗಿದೆ. ದೈನಂದಿನ ಪ್ರಯಾಣ ವೆಚ್ಚ ಉಳಿತಾಯವಾಗಿ ಆ ಹಣವನ್ನು ಇತರೆ ಅಗತ್ಯತೆಗಳಿಗೆ ಬಳಸಿಕೊಳ್ಳಬಹುದಾಗಿದ್ದು, ಶಕ್ತಿ ಯೋಜನೆ ಪ್ರಯಾಣ ಅಷ್ಟೇ ಅಲ್ಲದೇ ಮಹಿಳೆಯರ ಆರ್ಥಿಕ ಸ್ವಾವಲಂಬನೆ ಹೊಂದಲು ಸಾಧ್ಯವಾಗಿದೆ. ಅಲ್ಲದೇ ವಿದ್ಯಾರ್ಥಿಗಳಿಗೂ ಅನುಕೂಲವಾಗಿದೆ. ಜನವರಿ ತಿಂಗಳ ಅಂತ್ಯದೊಳಗೆ ರಾಜ್ಯದ ಎಲ್ಲಾ ರಸ್ತೆಗಳನ್ನು ಗುಂಡಿಮುಕ್ತಗೊಳಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸೂಚಿಸಿದ್ದಾರೆ. ಹಾಗಾಗಿ ಸೊರಬ ಕ್ಷೇತ್ರದ ಅಭಿವೃದ್ಧಿ ಕಾರ್ಯಕ್ಕೆ ಬಿಡುಗಡೆಯಗಿರುವ 50 ಕೋಟಿ ರೂಪಾಯಿಗಳಲ್ಲಿ 45 ಕೋಟಿ ರೂಪಾಯಿಗಳನ್ನು ರಸ್ತೆ ಅಭಿವೃದ್ಧಿಗೆ ಬಳಸಲಾಗುತ್ತಿದ್ದು, ಈಗಾಗಲೇ ಕಾಮಗಾರಿ ಆರಂಭಿಸಲಾಗಿದೆ. ಗ್ರಾಮೀಣ ಜನರ ಬೇಡಿಕೆಯ ಹಿನ್ನೆಲೆಯಲ್ಲಿ ಕ್ಷೇತ್ರದಾದ್ಯಂತ ಇನ್ನೂ 15 ಸಾರಿಗೆ ಬಸ್ ವ್ಯವಸ್ಥೆ ಕಲ್ಪಿಸಲಾಗುವುದು. ಈ ಸಂದರ್ಭದಲ್ಲಿ ವಿಭಾಗೀಯ ಸಂಚಲನಾಧಿಕಾರಿ ದಿನೇಶ ಕುಮಾರ್ ಚನ್ನಗಿರಿ, ಸಾಗರ ಘಟಕ ವ್ಯವಸ್ಥಾಪಕ ಶ್ರೀಶೈಲ ಬಿರಾದಾರ, ಸಂಚಾರ ನಿಯಂತ್ರಕ ರುದ್ರೇಶ ನಂದೂರು, ಶಿರಸಿ ಶಾಸಕ ಭೀಮಣ್ಣನಾಯ್ಕ್, ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಚಂದ್ರಭೂಪಾಲ, ತಾಲೂಕು ಅಧ್ಯಕ್ಷ ಜಯಶೀಲಗೌಡ ಅಂಕರವಳ್ಳಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಡಿ.ಬಿ ಅಣ್ಣಪ್ಪ ಹಾಲಘಟ್ಟ, ಸದಾನಂದಗೌಡ ಬಿಳಗಲಿ, ಪ್ರಮುಖರಾದ ಹೆಚ್ ಗಣಪತಿ, ಎಂ.ಡಿ ಶೇಖರ್, ಕೆ.ವಿ ಗೌಡ, ಶಿವಲಿಂಗೇಗೌಡ, ಕಲ್ಲಂಬಿ ಹಿರಿಯಣ್ಣ, ಶ್ರೀಕಾಂತ ಚಿಕ್ಕಶಕುನ, ಅತಿಕುರ್ ರೆಹಮಾನ್ ಮತ್ತಿತರರಿದ್ದರು. ವರದಿ: ಸಂದೀಪ ಯು.ಎಲ್ ಸೊರಬ4