ಭಾಲ್ಕಿ ನಗರದಲ್ಲಿ ನಡೆಯಲಿರುವ ಗಣೇಶ ಚತುರ್ಥಿ ಹಬ್ಬವನ್ನು ಶಾಂತಿಯುತವಾಗಿ ಹಾಗೂ ಸೌಹಾರ್ದತೆಯಿಂದ ಆಚರಿಸಬೇಕೆಂದು ಉಪ ಪೊಲೀಸ್ ಅಧೀಕ್ಷಕ ಶಿವಾನಂದ್ ಪವಡ್ ಶೆಟ್ಟಿ ಕರೆ ನೀಡಿದರು. ಹಬ್ಬದ ಹಿನ್ನೆಲೆ ನಗರ ಉಪ ಪೊಲೀಸ್ ಅಧೀಕ್ಷಕರ ಕಚೇರಿಯಲ್ಲಿ ಪೊಲೀಸ್ ಇಲಾಖೆಯ ನೇತೃತ್ವದಲ್ಲಿ ಶಾಂತಿ ಸಭೆ ನಡೆಯಿತು. ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಹಬ್ಬದ ಸಮಯದಲ್ಲಿ ಶಾಂತಿ, ಸೌಹಾರ್ದತೆ ಹಾಗೂ ಸುವ್ಯವಸ್ಥೆ ಕಾಪಾಡಿಕೊಳ್ಳುವಂತೆ ಮನವಿ ಮಾಡಿದರು. ಮೆರವಣಿಗೆ ಮಾರ್ಗ, ಧ್ವನಿವರ್ಧಕಗಳ ಬಳಕೆ, ಸಮಯ ನಿಯಮಗಳು ಮತ್ತು ಸ್ವಚ್ಛತೆ ಕುರಿತು ಸ್ಪಷ್ಟ ನಿರ್ದೇಶನಗಳನ್ನು ನೀಡಿದರು. ಗಣೇಶ್ ಪ್ರತಿಷ್ಠಾಪನಾ ಮಂಡಳಿಗಳು ಸಾಧ್ಯವಾದಷ್ಟು ಸ್ಥಳಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಬೇಕೆಂದು ಅವರು ಸಲಹೆ ನೀಡಿದರು. "ಸಿಸಿಟಿವಿ ಕ್ಯಾಮೆರಾ ಅಳವಡಿಸುವುದರಿಂದ ಯಾವುದೇ ಅಹಿತಕರ ಘಟನೆ ಸಂಭವಿಸಿದಾಗ ಪತ್ತೆಹಚ್ಚಲು ಸಹಕಾರಿಯಾಗುತ್ತದೆ" ಎಂದರು. ಕೆಲವು ತಿಂಗಳುಗಳ ಹಿಂದೆ ನಡೆದ ಕಳ್ಳತನ ಪ್ರಕರಣವನ್ನು ಉದಾಹರಿಸಿ, ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಕಳ್ಳರನ್ನು ಬಂಧಿಸಿದ್ದೇವೆ ಎಂದು ತಿಳಿಸಿದರು. "ಹಬ್ಬವನ್ನು ಎಲ್ಲರೂ ಸಂತೋಷದಿಂದ ಆಚರಿಸಬೇಕು. ಯಾವುದೇ ರೀತಿಯ ಪ್ರಚೋದನಾತ್ಮಕ ನಡೆ-ನುಡಿಗಳಿಗೆ ಅವಕಾಶ ನೀಡಲಾಗುವುದಿಲ್ಲ" ಎಂದು ಎಚ್ಚರಿಸಿದರು. ಅಗ್ನಿಶಾಮಕ ಇಲಾಖೆಯ ಅಧಿಕಾರಿ ದತ್ತಾತ್ರೇಯ ಅಂಬ್ರೆ ಮಾತನಾಡಿ, ಗಣೇಶ್ ಪ್ರತಿಷ್ಠಾಪನೆ ವೇಳೆ ಅಗ್ನಿ ಅವಘಡಗಳು ಸಂಭವಿಸದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕೆಂದು ಹೇಳಿದರು. ಇಲ್ಲಿವರೆಗೆ ಹಬ್ಬದ ಸಂದರ್ಭದಲ್ಲಿ ಯಾವುದೇ ಅಗ್ನಿ ಅವಘಡ ಸಂಭವಿಸಿಲ್ಲ. ಆದರೆ ಮುನ್ನೆಚ್ಚರಿಕೆ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು” ಎಂದು ಹೇಳಿದರು. ಪೆಂಡಲ್ ನಿರ್ಮಾಣದಲ್ಲಿ ಅಗ್ನಿ ನಿರೋಧಕ ವಸ್ತುಗಳನ್ನು ಬಳಸುವುದು, ವಿದ್ಯುತ್ ಸಂಪರ್ಕವನ್ನು ನುರಿತ ತಜ್ಞರಿಂದ ಮಾತ್ರ ಪಡೆಯುವುದು, ನೀರಿನ ಬಕೆಟ್‌ಗಳು ಹಾಗೂ ಉಸುಕು ಇತ್ಯಾದಿ ಸಿದ್ಧವಾಗಿಡುವುದು ಮುಂತಾದ ಕ್ರಮಗಳನ್ನು ಕೈಗೊಳ್ಳಲು ಸಲಹೆ ನೀಡಿದರು. ನಂತರ ಜೆಸ್ಕಾಂ ಪ್ರಭಾರಿ ಶಾಖಾಧಿಕಾರಿ ತಾನಾಜಿ ಜಾಧವ್ ಮಾತನಾಡಿ, ಗಣೇಶ್ ಪ್ರತಿಷ್ಠಾಪನಾ ಮಂಡಳಿಗಳು 11 ದಿನಗಳ ಅವಧಿಗೆ ವಿದ್ಯುತ್ ಸಂಪರ್ಕ ಪಡೆಯಲು ಪರವಾನಗಿ ಕಡ್ಡಾಯ ಎಂದು ಹೇಳಿದರು. "ಇದಕ್ಕಾಗಿ ₹2,500 ಪಾವತಿಸಿ ಪರವಾನಗಿ ಪಡೆಯಬೇಕು" ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಪುರಸಭೆ ಅಧಿಕಾರಿ ಸಂಗಮೇಶ್ ಕಾರ್ಬರಿ, ಸಿಪಿಐ ಅಂಬರೀಶ್ ಬಿರಾದರ್, ಹೆಡ್ ಕಾನ್ಸ್ಟೇಬಲ್ ಮಹೇಶ್, ಪರಮೇಶ್, ವೀರಶೆಟ್ಟಿ ಸೇರಿದಂತೆ ಪೊಲೀಸ್ ಸಿಬ್ಬಂದಿ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧಿಕಾರಿ ಹಾಗೂ ಮುಖಂಡರು ಶಿವ ಲೋಕಂಡೆ, ಸಂಜು ಕುಮಾರ್ ಬಾವಿಕಟ್ಟಿ, ಕೆ.ಡಿ. ಗಣೇಶ್, ಪ್ರಶಾಂತ್ ಕೊಟ್ಗೆರೆ, ಬಾಲಾಜಿ ಖೇಡಕರ್ ಮತ್ತು ಇತರರು ಉಪಸ್ಥಿತರಿದ್ದರು.

- ಬಿ ಎಸ್ ಲಾವೇಂದ್ರರವರ ಹೋಮಿಯೋಪತಿ ಕಾಲೇಜ್ ಹಾಗೂ ಆಸ್ಪತ್ರೆಯಲ್ಲಿ 27 ವರ್ಷ ಸೇವೆ1
- Post by SRI RABINDRANATH TAGORE HIGH SCHOOL BIJAPUR1
- ಬೂದುಗುಂಪ ಗಂಗಾವತಿ ರೂಟ್ ಸೆಂಟ್ರಲ್ಲಿ ಆಗಿರುವಂತ ಅಪಘಾತ ಮೂವರು ಸ್ಥಳದಲ್ಲಿ 3 ಸಾವು ಹೊಸಳ್ಳಿ ಗ್ರಾಮದ ಯುವಕರು ಅವರ ಹೆಸರು ಇಮ್ರಾನ್ ಮತ್ತು ಅಜೀಜ್ ಮತ್ತು ರಾಜಹಂಸೇನ್ 15 ರಿಂದ 16 ವಯಸ್ಸಿನ ಮಕ್ಕಳು1
- Post by Shiva Prasad1
- ನಮಸ್ತೆ ಕರ್ನಾಟಕ ನಮಸ್ತೆ ವೀಕ್ಷಕರೇ ಹೆಚ್ ಟಿ ಎಂ ಆಯುರ್ವೇದ ಹಕೀಮ್ ನೌಷದ್ ಖಾನ್ (ಪಾರಂಪರಿಕ )1
- Post by Mahadev c c1
- *ಭಾರತ ನಲ್ಲಿ ವೈರಲ್*1
- ನಮಸ್ತೆ ಕರ್ನಾಟಕ ನಮಸ್ತೆ ವೀಕ್ಷಕರೇ ಹೆಚ್ ಟಿ ಎಂ ಆಯುರ್ವೇದ ಬೆಂಗಳುರು ಡೋರ್ ಸ್ಟೆಪ್ ಟ್ರೆಟ್ಮೆಂಟ್ಸ್ ಲಭ್ಯವಿದೆ1